ಜಿಲ್ಲೆ

ಮಂಡ್ಯ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿದೆ ಉದ್ಯೋಗಾವಕಾಶ: ವಿದ್ಯಾರ್ಹತೆ ಬೇಕಿಲ್ಲ, ಕನ್ನಡ ಗೊತ್ತಿದ್ದರೆ ಸಾಕು

arunakunigal

ಮಂಡ್ಯ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿ ಇರುವ ಲೋಡರ್ಸ್​ ಮತ್ತು ಕ್ಲೀನರ್ಸ್​ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಅರ್ಜಿ ಸಲ್ಲಿಸಬಹುದು. ಎಲ್ಲ ಹುದ್ದೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಎ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ವೇತನ ತಿಂಗಳಿಗೆ 17,000 ದಿಂದ 28,950 ರೂ. ಇರಲಿದೆ.

ಎಲ್ಲೆಲ್ಲಿ ನೇಮಕ?

  • ಮಂಡ್ಯ ನಗರಸಭೆ -6 ಹುದ್ದೆ (ಲೋಡರ್ಸ್​-4, ಕ್ಲೀನರ್​-2)
  • ಮದ್ದೂರು ಪುರಸಭೆ-6 (ಲೋಡರ್ಸ್-4, ಕ್ಲೀನರ್​-2)
  • ಮಳವಳ್ಳಿ ಪುರಸಭೆ-8 (ಲೋಡರ್ಸ್​-6, ಕ್ಲೀನರ್​-2)
  • ಶ್ರೀರಂಗಪಟ್ಟಣ ಪುರಸಭೆ-7 (ಲೋಡರ್ಸ್​-5, ಕ್ಲೀನರ್​-2)
  • ಕೆ.ಆರ್​.ಪೇಟೆ ಪುರಸಭೆ-10 (ಲೋಡರ್ಸ್​-8, ಕ್ಲೀನರ್​-2)
  • ಪಾಂಡವಪುರ ಪುರಸಭೆ-9 (ಲೋಡರ್ಸ್​-7, ಕ್ಲೀನರ್​-2)
  • ನಾಗಮಂಗಲ ಪುರಸಭೆ-9 (ಲೋಡರ್ಸ್​-7, ಕ್ಲೀನರ್​-2)
  • ಬೆಳ್ಳೂರು ಪಟ್ಟಣ ಪಂಚಾಯಿತಿ-1 (ಲೋಡರ್ಸ್​)

ಅರ್ಹತೆಗಳೇನು?: ವಿದ್ಯಾರ್ಹತೆ ಅನ್ವಯಿಸುವುದಿಲ್ಲ. ಕನ್ನಡ ಮಾತನಾಡಲು ಗೊತ್ತಿರಬೇಕು. ಲೋಡರ್ಸ್ ಮತ್ತು ಕ್ಲೀನರ್ಸ್​ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ಹೊರಗುತ್ತಿಗೆ ನೌಕರರು ಮಾತ್ರ ಅರ್ಜಿ ಸಲ್ಲಿಸಬೇಕು. ಎರಡೂ ಹುದ್ದೆಗಳಿಗೆ ಕನಿಷ್ಠ 18 ರಿಂದ 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: 17,000 ದಿಂದ 28,950 ರೂ. ಮಾಸಿಕ ವೇತನ ಇರಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?: ಅರ್ಜಿಯನ್ನು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆ ಅಥವಾ ಮಂಡ್ಯ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಪಡೆದು ಪೌರಾಯುಕ್ತರು/ಮುಖ್ಯಾಧಿಕಾರಿಗಳಿಂದ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಿ ನಿಗದಿತ ಅರ್ಜಿ ನಮೂನೆಯಲ್ಲೇ ಸಲ್ಲಿಸಬೇಕು. ಅಗತ್ಯ ದಾಖಲೆ ಸಲ್ಲಿಸುವ ಜತೆಗೆ ಅರ್ಜಿಯಲ್ಲಿರುವ ಎಲ್ಲ ಅಂಕಣಗಳನ್ನು ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು. ಲಕೋಟೆಯಲ್ಲಿ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು. ಸಮಯ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಮೀಸಲಾತಿ ಕೋರುವವರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ನೇಮಕಾತಿ ವಿಧಾನ: ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಪ್ರಕಾರ ಕರ್ನಾಟಕ ಪುರಸಭೆ 2021ರ ನಿಯಮದ ಪ್ರಕಾರ ನೇಮಕಾತಿ ಮಾಡಲಾಗುವುದು. ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು. ಸೇವಾ ಅವಧಿ ಒಂದೇ ಇದ್ದರೆ ವಯಸ್ಸಿಗೆ ಅನುಗುಣವಾಗಿ ಅರ್ಹರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಇರಲಿದೆ. ಇದಕ್ಕೆ ಯಾವುದೇ ಭತ್ಯೆ ನೀಡುವುದಿಲ್ಲ.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಡ್ಯ ಜಿಲ್ಲೆ, ಕೊಠಡಿ ಸಂಖ್ಯೆ: 21

ಅರ್ಜಿ ಸಲ್ಲಿಸಲು ಕೊನೇ ದಿನ: 6.6.2022 (ಸಂಜೆ 5.30ರೊಳಗೆ)

ಅಧಿಸೂಚನೆಗೆ: https://bit.ly/3ySCSeS (14ನೇ ಪುಟ)

ಮಾಹಿತಿಗೆ: erajyapatra.karnataka.gov.in