ಬೆಂಗಳೂರು: ಜೆ.ಪಿ.ನಗರದಲ್ಲಿರುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಕ್ಲೆಮೇಟ್ ಚೇಂಜ್ ಕೇಂದ್ರದಲ್ಲಿ ಆರಂಭಿಸಲಾಗುತ್ತಿರುವ ಹಲವು ಯೋಜನೆಗಳಲ್ಲಿ ವಿವಿಧ 16 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ವಿವಿಧ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಲು ಪ್ರಾಜೆಕ್ಟ್ ಅಸೋಸಿಯೇಟ್, ಲ್ಯಾಬ್ ಅಟೆಂಡರ್, ಲ್ಯಾಬ್ ಕೆಮಿಸ್ಟ್, ಫೀಲ್ಡ್ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಂಎಸ್ಸಿ/ಎಂಟೆಕ್/ಅರಣ್ಯ ವಿಷಯದಲ್ಲಿ ಪದವಿ/ಪ್ರಾಣಿಶಾಸ್ತ್ರ, ಕೀಟಶಾಸ್ತ್ರ, ಜೇನುಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಆಯಾ ಹುದ್ದೆಗೆ ಸಂಬಂಧಿಸಿದಂತೆ ಕನಿಷ್ಠ 6 ತಿಂಗಳಿಂದ 2 ವರ್ಷ ವೃತ್ತಿ ಅನುಭವ ಇರಬೇಕು.
ವೇತನ: ಸಂಸ್ಥೆಯ ನಿಯಮಾನುಸಾರ ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನ ನಿಗದಿಪಡಿಸಲಾಗಿದೆ. ಪ್ರಾಜೆಕ್ಟ್ಗೆ ಅನುಸಾರ ಒಂದರಿಂದ ಎರಡು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಅವಧಿ ವಿಸ್ತರಣೆ ಆಗಬಹುದು. ಆಸಕ್ತರು ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೇ ದಿನ: 26.4.2022
ಅಧಿಸೂಚನೆಗೆ: https://bit.ly/3LVnIJ7
ಮಾಹಿತಿಗೆ: empri.karnataka.gov.in