ಧಾರವಾಡ: ನಡುರಸ್ತೆಯಲ್ಲೇ ಮಹಿಳೆಯ ಕೈ ಹಿಡಿದು ಎಳೆದಾಡಿದ ಆರೋಪದಡಿ ಜೆಡಿಎಸ್ ಮುಖಂಡರೊಬ್ಬರ ಮೇಲೆ ಕೇಸ್ ದಾಖಲಾಗಿದೆ. ಮಹಿಳೆಯ ಕೈ ಹಿಡಿದು ಜೆಡಿಎಸ್ ಮುಖಂಡ ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸತ್ತೂರಿನ ಎಸ್ಡಿಎಂ ದಂತ ವೈದ್ಯಕೀಯ ಕಾಲೇಜು ಬಳಿ ಈ ಘಟನೆ ಸಂಭವಿಸಿದೆ. ಆರೋಪಿ ಹೆಸರು ಶ್ರೀಕಾಂತ ಜಮನಾಳ. ಅನಿಮತಿ ಅತ್ತಿಗೇರಿ ಎಂಬಾಕೆಯ ಮನೆಗೆ ನುಗ್ಗಿದ ಶ್ರೀಕಾಂತ, ಆಕೆಯೊಂದಿಗೆ ಗಲಾಟೆ ಮಾಡಿದ್ದಾರೆ. ಅಲ್ಲದೆ ಮಹಿಳೆಯನ್ನು ರಸ್ತೆಗೆ ಎಳೆದುತಂದಿದ್ದಾರೆ. ಗಲಾಟೆ ಬಿಡಸಲು ಹೋದ ಸ್ಥಳೀಯರಿಗೆ ಬೆದರಿಕೆ ಹಾಕಿದ್ದಾನೆ. ಈ ದೃಶ್ಯ ವೈರಲ್ ಆಗಿದೆ. ಆರೋಪಿ ವಿರುದ್ಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅನುಮತಿ ಅತ್ತಿಗೇರಿ ದೂರು ದಾಖಲಿಸಿದ್ದಾರೆ.