ಜಿಲ್ಲೆ

ಜೇಮ್ಸ್ ಟೀಸರ್​ ನೋಡಿ ಎದೆಕೊಯ್ದುಕೊಂಡ ಅಪ್ಪು ಅಭಿಮಾನಿ!

arunakunigal

ವಿಜಯನಗರ: ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೇ ಸಿನಿಮಾ 'ಜೇಮ್ಸ್'​. ಈ ಚಿತ್ರದ ಬಹುನಿರೀಕ್ಷಿತ ಟೀಸರ್​ ಇಂದು(ಶುಕ್ರವಾರ) ಬಿಡುಗಡೆಯಾಗಿದ್ದು, ಅಪ್ಪು ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ. ಪುನೀತ್​ರನ್ನು ಕಣ್ತುಂಬಿಕೊಂಡು ಭಾವುಕರಾಗಿದ್ದಾರೆ. ಆದರೆ, ವಿಜಯನಗರದಲ್ಲೊಬ್ಬ ಅಭಿಮಾನಿ ಜೇಮ್ಸ್​ ಟೀಸರ್​ ನೋಡಿ ಎದೆ ಕೊಯ್ದುಕೊಂಡ ಘಟನೆ ನಡೆದಿದೆ.

ಟೀಸರ್ ನೋಡಿದ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಅಪ್ಪು ಅಭಿಮಾನಿ ಕನಕ ಎಂಬಾತ ತನ್ನ ಎದೆ ಮೇಲೆ ಅಪ್ಪು ಎಂದು ಬರೆದುಕೊಳ್ಳುವ ಮೂಲಕ ಕೊಯ್ದುಕೊಂಡಿದ್ದಾನೆ. ಅಪ್ಪು ಅಭಿಮಾನಿ ಹೊಸಪೇಟೆಯ ಕಿಚಡಿ ವಿಶ್ವ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಮನೆಗೆ ಹೋಗಿ ಕನಕ ಎದೆ ಕೊಯ್ದುಕೊಂಡಿದ್ದಾನೆ.

ಕಿಚಡಿ ವಿಶ್ವ ಜತೆ ಕನಕ

ಹೊಸಪೇಟೆಯ ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಟೀಸರ್ ನೋಡಲು ಎಲ್​ಇಡಿ ಪರದೇ ವ್ಯವಸ್ಥೆ ಮಾಡಲಾಗಿತ್ತು. ಇದಾದ ಬಳಿಕ ಅಭಿಮಾನಿ ಕನಕ ಎದೆ ಕೊಯ್ದುಕೊಂಡಿದ್ದಾನೆ. ಈ ಸುದ್ದಿ ತಿಳಿದು ಬೇಸರ ವ್ಯಕ್ತಪಡಿಸಿದ ಪುನೀತ್ ಆಪ್ತ ಕಿಚಡಿ ವಿಶ್ವ, ಅಭಿಮಾನಿಗಳು ಉದ್ವೇಗಕ್ಕೊಳಗಾಗಬಾರದು. ಇಂತಹದ್ದೆಲ್ಲ ಅಪ್ಪುಗೆ ಇಷ್ಟ ಆಗುವುದಿಲ್ಲ. ಈ ಬಗೆಯ ಘಟನೆಯಿಂದ ಡಾ. ರಾಜ್ ಫ್ಯಾಮಿಲಿಯ ಯಾರೂ ಆತಂಕಕ್ಕೆ ಒಳಗಾಗಬೇಡಿ, ಬೇಸರ ಪಟ್ಟುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಯಾರೇ ನನ್ನ ಕೈಬಿಟ್ರೂ ಹೊಸಪೇಟೆ ಜನ ಕೈಬಿಡಲ್ಲ ಅಂತ ಅಪ್ಪು ಹೇಳಿದ್ರು. ನಮ್ಮ ಜೀವ ಇರೋವರೆಗೂ ರಾಜ್ ಫ್ಯಾಮಿಲಿ ಜತೆ ಇರ್ತೀವಿ. ಅಭಿಮಾನಿಗಳು ದುಡುಕಬಾರದು. ಅಪ್ಪು ಬಿಟ್ಟು ಹೋಗಿರುವ ಕೆಲಸವನ್ನ ನಾವೆಲ್ಲ ಒಟ್ಟಾಗಿ ಮುಂದುವರಿಸೋಣ ಎಂದು ಮನವಿ ಮಾಡಿದ್ದಾರೆ.