ಜಿಲ್ಲೆ

ಗ್ಯಾಂಗ್​ ರೇಪ್​ ಆರೋಪಿಗಳಿಗಿದೆ ಕ್ರಿಮಿನಲ್​ ಹಿನ್ನೆಲೆ! ಒಬ್ಬ 'ಮಾವನನ್ನೇ ಕೊಂದವ'... ಬಯಲಾಗ್ತಿದೆ ಭಯಾನಕ ಸತ್ಯ

arunakunigal

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗಿದೆ ಕ್ರಿಮಿನಲ್ ಹಿನ್ನೆಲೆ. 6 ಆರೋಪಿಗಳ ಪೈಕಿ ಐವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ತನಿಖೆ ವೇಳೆ ಇವರ ಅಪರಾಧ ಪ್ರಕರಣಗಳು ಒಂದೊಂದೇ ಬಯಲಾಗುತ್ತಿದೆ.

ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಕೊಲೆ ಆರೋಪಿಯಾಗಿದ್ದಾನೆ. ಪ್ರೀತಿಸಿದ ಹುಡುಗಿಯನ್ನ ಮದುವೆ ಮಾಡಕೊಡದಿದ್ದಾಗ ಆಕೆಯ ತಂದೆಯನ್ನೇ ಕೊಲೆ ಮಾಡಿದ್ದ ಎಂಬ ಮಾಹಿತಿ ಪೊಲೀಸರ ತನಿಖೆ ವೇಳೆ ಬೆಳಕಿಗಿ ಬಂದಿದೆ. ಈ ಐವರು ಆರೋಪಿಗಳೂ ಬಾಳೆ ಕಾಯಿ ಮಾರಾಟಕ್ಕೆ ಬಂದವರು ಮೈಸೂರಲ್ಲೇ ವಾಸ್ತವ್ಯ ಹೂಡಿದ್ದರು. ಚಾಮುಂಡಿಬೆಟ್ಟದ ಸುತ್ತಮುತ್ತಲಿನ ನಿರ್ಜನ ಪ್ರದೇಶವನ್ನೇ ಟಾರ್ಗೆಟ್​ ಮಾಡಿದ್ದ ಈ ಗ್ಯಾಂಗ್​, ರಾಬರಿ ಮಾಡಿ ಎಸ್ಕೇಪ್​ ಆಗುತ್ತಿತ್ತು. ಹಲವರ ಬಳಿ ರಾಬರಿ ಮಾಡಿದ್ದರೂ ಹಣ-ಮೊಬೈಲ್​-ಆಭರಣ ಕಳೆದುಕೊಂಡವರು ದೂರು ದಾಖಲಿಸಿಲ್ಲ. ನಿರ್ಜನ‌ ಪ್ರದೇಶಕ್ಕೆ ಏಕೆ ಹೋಗಿದ್ರಿ ಎಂದು ಪೊಲೀಸರು ಕೇಳಿದ್ರೆ ಎಂಬ ಭಯದಲ್ಲಿ ಸುಮ್ಮನಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.