ಮೈಸೂರು: ಹುಣಸೂರು ತಹಸೀಲ್ದಾರ್ ಆಗಿ ಬಡ್ತಿ ಹೊಂದಿದ್ದ ಮೋಹನ್‌ಕುಮಾರ್ ಅವರನ್ನು ತಹಸೀಲ್ದಾರ್ ಹುದ್ದೆಯಿಂದ ಕೆಳಗಿಳಿಸುವಂತೆ ಕೆಎಟಿ ಆದೇಶ ಹೊರಡಿಸಿದೆ.
ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ನಾಡಕಚೇರಿಯಲ್ಲಿ ಆರ್‌ಐ ಆಗಿದ್ದ ಮಹೋನ್ಕುಮಾರ್ ಅವರಿಗೆ ರಾಜ್ಯ ಸರ್ಕಾರ ಜುಲೈ 23ರಂದು ಗ್ರೇಡ್ 2 ತಹಸೀಲ್ದಾರ್ ಸ್ಥಾನಕ್ಕೆ ಬಡ್ತಿ ನೀಡಿತ್ತು. ಇದರ ನಡುವೆ ಗ್ರೇಡ್ 1 ತಹಸೀಲ್ದಾರ್ ಹುದ್ದೆಯಲ್ಲಿ ಕೂರಿಸಿತ್ತು. ಹುಣಸೂರು ತಹಸೀಲ್ದಾರ್ ಹುದ್ದೆಯನ್ನ ಮೋಹನ್‌ಕುಮಾರ್ ಅಲಂಕರಿಸಿದ್ದರು.
ಸರ್ಕಾರದ ಆದೇಶ ಪ್ರಶ್ನಿಸಿ ಹಿಂದಿನ ತಹಸೀಲ್ದಾರ್ ಬಸವರಾಜು ಕೆಎಟಿ ಮೆಟ್ಟಿಲೇರಿದ್ದರು. ಸದ್ಯ ಗ್ರೇಡ್ 1 ತಹಸೀಲ್ದಾರ್ ಹುದ್ದೆ ನಿರ್ವಹಿಸಲು ಮೋಹನ್‌ಕುಮಾರ್ ಅನರ್ಹ ಎಂದು ಕೆಎಟಿ ಆದೇಶ ಹೊರಡಿಸಿದೆ. ಉಪ ವಿಭಾಗಾಧಿಕಾರಿಗೆ ಅಧಿಕಾರ ಕೊಟ್ಟು ಕಂದಾಯ ಇಲಾಖೆಗೆ ವಾಪಸ್ ಹೋಗುವಂತೆ ಆದೇಶದಲ್ಲಿ ತಿಳಿಸಲಾಗಿದೆ.