oplus_2098176 
ಜಿಲ್ಲೆ

ರಸ್ತೆ ಬಿದ್ದ ಬೃಹತ್​ ಮರ

ಸೋಮಲಿಂಗ ತಳವಾರ

ಖಾನಾಪುರ: ತಾಲೂಕಿನ ಪಶ್ಚಿಮ ಭಾಗದಲ್ಲಿ ಕಳೆದ ನಾಲ್ಕೆ$ದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಿದೆ.

ಮಂಗಳವಾರ ಮಧ್ಯಾಹ್ನ ಪಟ್ಟಣ ಮೂಲಕ ಹಾದುಹೋಗುವ ಬೆಳಗಾವಿ&ಪಣಜಿ ರಾಷ್ಟ್ರೀಯ ಹೆದ್ದಾರಿಯ ರುಮೇವಾಡಿ ಕ್ರಾಸ್​ ಬಳಿ ದೊಡ್ಡ ಮಾವಿನ ಮರ ಉರುಳಿ ಬಿದ್ದಿದ್ದು, ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ ನೌಕರರು ಮರ ತೆರವುಗೊಳಿಸಿದರು.

ಮಲಪ್ರಭಾ ಮತ್ತು ಸಹಲತಾರಿ ನದಿಗಳು ತುಂಬಿ ಹರಿಯುತ್ತಿವೆ. ಆದರೂ ಪ್ರವಾಹದ ಆತಂಕ ಇಲ್ಲ. ಮಳೆಯಿಂದಾಗಿ ಗ್ರಾಮೀಣ, ರಾಜ್ಯ ರಸ್ತೆಗಳು ಸೇರಿ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.