ಜಿಲ್ಲೆ

ಅಮ್ಮಿನಬಾವಿಯಲ್ಲಿ ಧರೆಗುರುಳಿದ ಬೃಹತ್ ಮರ

Gadag - Desk - Tippanna Avadoot

ಉಪ್ಪಿನಬೆಟಗೇರಿ: ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಮರವೊಂದು ಉರುಳಿ ಬಿದ್ದಿದೆ.


ಗ್ರಾಮದ ಬಸ್ ನಿಲ್ದಾಣ ಹತ್ತಿರದ ಅಂಚೆ ಕಚೇರಿಯ ಕಾಂಪೌಂಡ್​ಗೆ ಹೊಂದಿಕೊಂದಿದ್ದ ಮರ ಬಿದ್ದಿದ್ದರಿಂದ ಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.

ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದ್ದರಿಂದ ಜನ ಭಯದಿಂದ ಅದರ ಬಳಿ ಸುಳಿಯಲಿಲ್ಲ. ಕೂಡಲೇ ಹೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.