ಕಾರವಾರ:ದಾಂಡೇಲಿ ಬಸವೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಸಂಬAಧ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಸಂಜಯ ಅಪ್ಪಾಸಾಹೇಬ ಚೌಗುಲಾ ವಿರುದ್ಧ ದಾಂಡೇಲಿ ಶಹರ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ. ಸ್ವತಃ ಸಂಘದ ಅಧ್ಯಕ್ಷ ವೀರೇಶ ಮಲ್ಲೇಶಪ್ಪ ಯರಗೇರಿ ಅವರು ದೂರು ನೀಡಿದ್ದಾರೆ.
ಇನ್ನೂ ಓದಿ: ಮುಂಡಗೋಡ ಪಟ್ಟಣವನ್ನು ತಲ್ಲಣಗೊಳಿಸಿದ್ದ ದರೋಡೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ
ಸಂಘದಲ್ಲಿ 2004 ರಿಂದ 2018 ರವರೆಗೆ ಇದ್ದ ಸಂಜಯ ಅಪ್ಪಾಸಾಹೇಬ ಚೌಗುಲಾ 10,42,155 ರೂ.ಗಳನ್ನು ಸುಳ್ಳು ಲೆಕ್ಕ ಬರೆದು ಅವ್ಯವಹಾರ ಮಾಡಿದ್ದಾರೆ. ಅದು ಲೆಕ್ಕ ಪರಿಶೋಧನೆ ವೇಳೆ ಬಯಲಾಗಿದೆ. ಸಂಘಕ್ಕೆ ನಂಬಿಕೆ ದ್ರೋಹ ಬಗೆದಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಚೌಗುಲಾ ವಿರುದ್ಧ ಕ್ರಮ ವಹಿಸುವಂತೆ ಕಾರವಾರ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಪತ್ರ ಬರೆದಿದ್ದು, ಅವರ ಸೂಚನೆಯಂತೆ ಶಹರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅಧ್ಯಕ್ಷ ಯರಗೇರಿ ತಿಳಿಸಿದ್ದಾರೆ.