nagara bhajane 
ಜಿಲ್ಲೆ

ಕೋಟೇಶ್ವರದಲ್ಲಿ ಬೃಹತ್ ನಗರ ಭಜನೋತ್ಸವ

ಕುಂದಾಪುರ: ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಗಳ ಚಾತುರ್ಮಾಸ ಹಾಗೂ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಗಳ ಜನ್ಮ ಶತಮಾನೋತ್ಸವ ಆಚರಣೆ ಪ್ರಯುಕ್ತ ಬೃಹತ್ ನಗರ ಭಜನೋತ್ಸವ ಕಾರ್ಯಕ್ರಮ ಭಾನುವಾರ ಕೋಟೇಶ್ವರದಲ್ಲಿ ಜರುಗಿತು.

ಶ್ರೀ ಸಂಸ್ಥಾನದ ದೇವರ ಸನ್ನಿಧಿಯಲ್ಲಿ ಜರುಗುತ್ತಿರುವ ಶತನಮನ ಶತಸ್ಮರಣ ಶತದಿವಸ ಅಖಂಡ ಭಜನೆ ಅರುವತ್ತು ದಿನ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳೂ ನಡೆಯಿತು.

ಸಾಸ್ತಾನ-ಕೋಟ-ಕುಂಬಾಶಿಯಿಂದ, ಗಂಗೊಳ್ಳಿ-ಕುಂದಾಪುರ ಕಡೆಯಿಂದ, ಹೊಸಂಗಡಿ-ಸಿದ್ದಾಪುರ ಕಡೆಯಿಂದ ಆರಂಭಗೊಂಡ ಭಜನಾ ಮೆರವಣಿಗೆಗಳು ಆಗಮಿಸಿದವು.

ಸಂಜೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಿಂದ ನಗರ ಭಜನೋತ್ಸವ ಆರಂಭಗೊಂಡಿದ್ದು, ಎಂ.ವಿ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಾಗಿ ಸಾಗಿ ಶ್ರೀ ಪಟ್ಟಾಭಿ ರಾಮಚಂದ್ರ ದೇವಳದಲ್ಲಿ ಸಂಪನ್ನಗೊಂಡಿತು. ಕಾಶೀ ಮಠಾಧೀಶ ಶ್ರೀ ಮದ್ ಸಂಯಮೀಂದ ತೀರ್ಥ ಶ್ರೀಗಳು ಉಪಸ್ಥಿತರಿದ್ದರು. ಊರ ಪರವೂರ ಸಾವಿರಾರು ಭಕ್ತರು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿದ್ದರು.