ಜಿಲ್ಲೆ

ಕರೊನಾ ಲಸಿಕೆಯನ್ನು ಅರೆಬರೆ ಬಳಸಿ ಬಿಸಾಡಿದ ಆಸ್ಪತ್ರೆ ಸಿಬ್ಬಂದಿ!

ದಾವಣಗೆರೆ: ಕೋವಿಡ್‌ ಲಸಿಕೆ ಪಡೆಯಲು ತಾ ಮುಂದು- ನಾ ಮುಂದು ಎಂಬಂತೆ ಲಸಿಕಾ ಕೇಂದ್ರದ ಮುಂದೆ ಸಾವಿರಾರು ಮಂದಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಮೊದಲ ಡೋಸ್​ ಆದರೂ ಸಿಕ್ಕರೆ ಸಾಕಪ್ಪ ಎಂದು ಲೆಕ್ಕವಿಲ್ಲದಷ್ಟು ಮಂದಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಇಲ್ಲಿನ ಆಸ್ಪತ್ರೆ ಸಿಬ್ಬಂದಿ ಬರೋಬ್ಬರಿ 17 ಲಸಿಕೆ ವಾಯಲ್‌ಗಳನ್ನು ಅರೆ ಬರೆ ಬಳಸಿ ಬಿಸಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಟಿಎಚ್‌ಒ ಡಾ.ನಾಗರಾಜ್‌ ಧಿಡೀರ್​ ಭೇಟಿ ನೀಡಿ ಲಸಿಕೆ ದಾಸ್ತಾನು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಸ್ಪಷ್ಟ ಮಾಹಿತಿ ನೀಡಲು ಹಿರಿಯ ಫಾರ್ಮಸಿಸ್ಟ್‌ ತಡಬಡಿಸಿದರೆ, ಅತ್ತ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಉಡಾಫೆ ಉತ್ತರ ನೀಡಿದ್ದಾರೆ. ಲಸಿಕೆ ದುರಪಯೋಗ ಮಾಡಿದ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಟಿಎಚ್ಒ, ಅರೆ ಬಳಕೆ ಮಾಡಿ ಬಿಸಾಡಿದ ವಾಯಿಲ್‌ಗಳನ್ನು ಸಂಗ್ರಹಿಸಿ ನೋಟಿಸ್‌ ಜಾರಿ ಮಾಡಿದ್ದಾರೆ.