ಜಿಲ್ಲೆ

ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವ ನರಿಯ ಜಾಯಮಾನಕ್ಕೆ ಸೇರಿದವರು ವಿಶ್ವನಾಥ್​: ಎಚ್​ಡಿಕೆ ಆಕ್ರೋಶ

arunakunigal

ಮಂಡ್ಯ: ಜೆಡಿಎಸ್‌ನಲ್ಲಿ ಕುಟುಂಬ ರಾಜಕೀಯ ಇದೆ ಅನ್ನೋದು ನಮ್ಮ ಪಕ್ಷದ ಅಭ್ಯರ್ಥಿ ಆಗುವ ಮೊದಲು ಎಚ್​. ವಿಶ್ವನಾಥ್‌ಗೆ ಗೊತ್ತಿರಲಿಲ್ವ. ಇಡೀ ಜೆಡಿಎಸ್ ಪಕ್ಷ ದೇವೇಗೌಡರ ಕುಟುಂಬ. ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ಲವೇ? ಡಿಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲವೇ? ಅದು ಕುಟುಂಬ ರಾಜಕೀಯ ಅಲ್ಲವೇ? ಇಡೀ ರಾಜ್ಯದಲ್ಲಿ ಯಾರೊಬ್ಬರಿಗೂ ಜೆಡಿಎಸ್​ ಅನ್ನು ಕುಟುಂಬ ರಾಜಕಾರಣ ಎಂದು ಹೇಳುವ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಕೆ.ಆರ್‌.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವಿಶ್ವನಾಥ್‌ಗೆ ಯಾವ ಪಕ್ಷದಲ್ಲೂ ಇರೋಕೆ ಆಗಲ್ಲ. ಅವರಿಗೆ ಬೇಕಿರೋದು ಅಧಿಕಾರ ಮತ್ತು ಹಣ. ಅವರೆಡೂ ಸಿಗದಿದ್ದಾಗ ಎಲ್ಲರನ್ನೂ ಬೈಯುತ್ತಾ ಓಡಾಡುತ್ತಾರೆ. ನರಿಗೆ ದ್ರಾಕ್ಷಿ ಎಟಕದೇ ಇರುವಾಗ ಹುಳಿ ಎನ್ನುವುದಿಲ್ಲವೇ. ಅಂತಹ ಜಾಯಮಾನಕ್ಕೆ ಸೇರಿದವರು ವಿಶ್ವನಾಥ್. ರಾಕ್ಷಸಿ ಸರ್ಕಾರ ಎಂದಾಗ ಯಡಿಯೂರಪ್ಪ ಅವರಿಗೆ ವಯಸ್ಸು ಆಗಿದೆ ಅನ್ನೋದು ಅವರಿಗೆ ಗೊತ್ತಿರಲಿಲ್ವ ಎಂದರು.