ಜಿಲ್ಲೆ

‘ಎ ಹಿಂದೂ ಇನ್ ಆಕ್ಸ್ ಫರ್ಡ್’ ಕೃತಿ ಲೋಕಾರ್ಪಣೆ

Bengaluru - General - Rama Kishan K V

ಬೆಂಗಳೂರು: ಅರಿವಿಲ್ಲದ ವಿಷಯಗಳು ಸಮಸ್ಯೆಯ ಭಾಗವಾಗಿರುವುದರಿಂದ ನಮ್ಮ ಇತಿಹಾಸವನ್ನು ವಿದೇಶಿಯರು ತಿರುಚಿ ಸಾರಿದ್ದಾರೆ ಎಂದು ಲೇಖಕಿ ರಶ್ಮಿ ಸಮಂತ್‌ ಹೇಳಿದ್ದಾರೆ.

ಬಸವನಗುಡಿಯ ಡಾ.ಸಿ.ಅಶ್ವತ್ ಕಲಾ ಭವನದಲ್ಲಿ ಥಿಂಕರ್ಸ್ ಫೋರಂ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಮತ್ತು ಸಂವಾದದಲ್ಲಿ ಮಾತನಾಡಿದರು.

ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದಾಗ ಹಿಂದು ಎಂಬ ಕಾರಣಕ್ಕೆ ಮಾನಸಿಕ ಕಿರುಕುಳ ನೀಡಲಾಯಿತು. ಆ ವೇಳೆ ಅನುಭವಿಸಿದ ಕಷ್ಟ, ದುಃಖ ಮತ್ತು ಹೋರಾಡಿದ ರೀತಿಯನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದರು.

ನಿರ್ದಿಷ್ಟ ಧರ್ಮದೆಡೆಗೆ ತಿರಸ್ಕಾರವಿರುವ ಮಾತ್ರಕ್ಕೆ ಆ ಧರ್ಮದವರನ್ನು ಅವಕಾಶ ವಂಚಿತರನ್ನಾಗಿ ಮಾಡುವುದು ಅನ್ಯಾಯ. ಹಿಂದುಗಳು ಬದುಕಿ ಜಯಿಸುವ ಸಾಮರ್ಥ್ಯ ಉಳ್ಳವರು, ಬಲಿಪಶುಗಳಲ್ಲ ಎಂದರು.

ಮಣಿಪಾಲ್ ಗ್ಲೋಬಲ್ ಎಜುಕೇಶನ್ ಮುಖ್ಯಸ್ಥ ಟಿ.ವಿ. ಮೋಹನ್‌ದಾಸ್ ಪೈ ಮಾತನಾಡಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ನವ ಭಾರತವನ್ನು ಪ್ರತಿನಿಧಿಸಬೇಕು ಎಂದು ಹೇಳಿದರು.