ಜಿಲ್ಲೆ

ನ್ಯಾಯಕ್ಕಾಗಿ ಹೋರಾಡಿದ ನಾಯಕ

ಸೋಮಲಿಂಗ ತಳವಾರ

ಅಥಣಿ ಗ್ರಾಮೀಣ: ಡಾ.ಬಿ.ಆರ್​.ಅಂಬೇಡ್ಕರ್​ ಸಂವಿಧಾನ ಸರ್ವ ವರ್ಗದ ಜನರ ಒಳಿತಿಗಾಗಿ ರಚನೆಯಾಗಿದ್ದು, ಮಾನವಕುಲದ ಉದಾಟಛಿರಕ್ಕಾಗಿ ಬಾಬಾಸಾಹೇಬರ ಕೊಡುಗೆ ಅಪಾರ ಎಂದು ಉಪಪ್ರಾಚಾರ್ಯ ಅನಿಲ ಮೇಲಿನಕೇರಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಅಂಬೇಡ್ಕರ್​ ವತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್​ ಜಯಂತಿ ನಿಮಿತ್ತ ಪುತ್ಥಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್​ ಅವರಂತೆ ಶಿಣ, ಜ್ಞಾನ ಪಡೆಯಲು ಯುವಜನರು ಹಾತೊರೆಯಬೇಕು. ಜಾತೀಯತೆ, ಅಸಮಾನತೆ ವಿರುದಟಛಿ ಹೋರಾಡಲು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಒದಗಿಸಲು ಜೀವನವನ್ನೇ ಮುಡಿಪಾಗಿಟ್ಟವರು ಅಂಬೇಡ್ಕರ್​ ಎಂದು ಹೇಳಿದರು.

ಡಿಎಸ್​ಎಸ್​ ಮುಖಂಡ ಪ್ರವಿಣ ತುಬಚಿ ಮಾತನಾಡಿ, ಅಸ್ತ್ರ ಹಿಡಿದವರನ್ನು ಸೋಲಿಸಬಹುದು. ಆದರೆ, ಪುಸ್ತಕ ಹಿಡಿದವರನ್ನು ಎಂದಿಗೂ ಸೋಲಿಸಲಾಗದು. ಶಿಣ ಹುಲಿ ಹಾಲಿದ್ದಂತೆ. ಅದನ್ನು ಕುಡಿದವನು ರ್ಜಿಸಲೇಬೇಕು ಎಂದು ಅಂಬೇಡ್ಕರ್​ ಹೇಳಿದ್ದಾರೆ ಎಂದರು. ಗ್ರಾಮದ ಎಲ್ಲ ಬಡಾವಣೆಗಳಲ್ಲಿ ಕಲಾವಿದರು ಹಾಗೂ ನತ್ಯ ತಂಡವು ಡಾ. ಬಾಬಾಸಾಹೇಬ ಅಂಬೇಡ್ಕರ್​ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ ಮಾಡಲಾಯಿತು. ವಕೀಲ ಸಂಪತ ಶಿಂಗೆ, ಮುಖಂಡರಾದ ಅಶೋಕ ಜಂಬಗಿ, ಮುಕುಂದ ಹೆಗ್ರೆ, ಸತೀಶ ದೊಡಮನಿ, ರಾಜಶ್ರೀ ಹೆಗ್ರೆ, ಪ್ರಲ್ಹಾದ ದಡ್ಡಿ, ರಾಜಕುಮಾರ ತಳಕೇರಿ, ಭರತೇಶ ದಡ್ಡಿ, ಪ್ರಕಾಶ ಹೆಗ್ರೆ, ಸುರೇಶ ದೊಡಮನಿ, ಸುನೀಲ ಧಡಕೆ, ಬಂಡು ಜಾಧವ, ಮಂಜುನಾಥ ಧಡಕೆ, ಶ್ರೀಶೆಲ ದೊಡಮನಿ, ಗ್ರಾಮ ಆಡಳಿತಾಧಿಕಾರಿ ಕಲ್ಮೇಶ ಕಲಮಡಿ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ ಇತರರಿದ್ದರು.