ಜಿಲ್ಲೆ

ರಾಣೇಬೆನ್ನೂರಲ್ಲಿ ಧಾರಾಕಾರ ಮಳೆ: ಜನರ ಬದುಕು ಮೂರಾಬಟ್ಟೆ

ಹಾವೇರಿ: ರಾಣೇಬೆನ್ನೂರಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನರ ಬದುಕು ಮೂರಾಬಟ್ಟೆಯಾಗಿದೆ.

ವಿಕಾಸ ಬಡಾವಣೆಯಲ್ಲಿ ಮನೆಗಳೆಲ್ಲ ಜಲಾವೃತಗೊಂಡು ಜನರ ರಾತ್ರಿಯಿಡೀ ಪರದಾಡಿದರು. ಮನೆ ತುಂಬೆಲ್ಲಾ ನಡುಮಟ್ಟದವರೆಗೂ ನೀರು ಆವರಿಸಿದ್ದರಿಂದ 20ಕ್ಕೂ ಅಧಿಕ ಕುಟುಂಬಗಳು ಊಟ-ನಿದ್ದೆ ಇಲ್ಲದೆ ಪರದಾಡಿದರು.

ಮನೆಯ ಒಳಗೆ ನೀರಲ್ಲಿ ಸಿಲುಕಿದ್ದ ಕುಟುಂಬಸ್ಥರನ್ನು ಅಗ್ನಿಶಾಮಕ ಅಧಿಕಾರಿಗಳಾದ ಎಸ್​.ಎಸ್.ಶಿವಳ್ಳಿ, ಎಚ್​.ಬಿ.ಹಾಕಿಯಾಲ್ವರ್ ಸೇರಿ ಸಿಬ್ಬಂದಿ ಹೊರಗೆ ಕರೆತಂದರು.