ಜಿಲ್ಲೆ

ಮನಸೂರೆಗೊಂಡ ಒಂದು ಪ್ರೇಮ ಕಥೆ

ಸೋಮನಾಥ ರೆಡ್ಡಿ

ಮುಂಡರಗಿ: ಲಿಮ್ಕಾ ದಾಖಲೆಗಾಗಿ ಏಕವ್ಯಕ್ತಿ ರಂಗಪ್ರದರ್ಶನ ಮಾಡಿರುವುದು ಶ್ಲಾಘನೀಯ. ರಂಗಭೂಮಿ ಕಲೆಗೆ ಸಹಕಾರ ನೀಡಿ, ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ರಂಗಭೂಮಿ ಕಲಾವಿದ ವೈ.ಎನ್. ಗೌಡರ ಹೇಳಿದರು.

ಪಟ್ಟಣದ ಪುರಸಭೆ ಮೈದಾನದಲ್ಲಿ ಬೆಂಗಳೂರಿನ ರಂಗಪಯಣದ ವತಿಯಿಂದ ಲಿಮ್ಕಾ ದಾಖಲೆಗಾಗಿ 55 ನಿಮಿಷದ ಏಕವ್ಯಕ್ತಿ ಅಭಿಯನದ ಒಂದು ಪ್ರೇಮ ಕಥೆ ರಂಗ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತತವಾಗಿ 55 ನಿಮಿಷ ಒಬ್ಬ ವ್ಯಕ್ತಿಯೇ ಅಭಿನಯಿಸಿ ಎಲ್ಲರ ಗಮನ ಸೆಳೆಯುವುದು ಸುಲಭದ ಕಾರ್ಯವಲ್ಲ. ಇಂತಹ ಕಾರ್ಯ ರಂಗಪಯಣದ ರಾಜಗುರು ಅವರ ರಚನೆ, ಸಂಗೀತ, ನಿರ್ದೇಶನ ಗಮನಾರ್ಹವಾಗಿದೆ ಎಂದರು.

ರಂಗಭೂಮಿ ಕಲಾವಿದ ಸಂತೋಷರಾವ್ ಸುರ್ವೆ ಅವರು ಒಬ್ಬರೆ ಅಭಿನಯಿಸಿ ತಮ್ಮ ಸಂಭಾಷಣೆ ಮೂಲಕ ನಟನೆ ಮಾಡಿದ್ದು, ಎಲ್ಲರ ಗಮನ ಸೆಳೆಯಿತು. ಮೃತ್ಯುಂಜಯ ಮೇಲಿನಮನಿ ಅವರ ಸಂಗೀತ ನಿರ್ವಹಣೆ ಉತ್ತಮವಾಗಿತ್ತು.

ಕಲಾವಿದ ಸಂತೋಷರಾವ್ ಹಾಗೂ ಮೃತ್ಯುಂಜಯ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯರಾದ ನಾಗೇಶ ಹುಬ್ಬಳ್ಳಿ, ನಾಗರಾಜ ಹೊಂಬಳಗಟ್ಟಿ, ರಾಜೇಭಕ್ಷಿ ಬೆಟಗೇರಿ, ಪರುಶುರಾಮ ಕರಡಿಕೊಳ್ಳ, ಕೊಟ್ರೇಶ ಅಂಗಡಿ, ಎಚ್.ವಿರೂಪಾಕ್ಷಗೌಡ್ರ, ಬಿ.ವಿ. ಮುದ್ದಿ, ಗೋವಿಂದರಾಜ ಹೆಗ್ಗಡಾಳ, ಮಂಜುನಾಥ ಇಟಗಿ, ರಾಜು ದಾವಣಗೇರಿ, ಡಿ.ಎಂ. ಕಾತರಕಿ, ಎಸ್.ಎಸ್. ಗಡ್ಡದ, ಅಮೀನಸಾಬ್ ಬಿಸನಳ್ಳಿ, ಪ್ರಶಾಂತಗೌಡ ಗುಡದಪ್ಪನವರ, ಮಂಜುನಾಥ ಮುಧೋಳ ಇತರರು ಇದ್ದರು.