ಜಿಲ್ಲೆ

ಸಮಾಜ ಕಲ್ಯಾಣ ಇಲಾಖೆಯಿಂದ ವಿ.ವೆಂಕಟರಾಜುಗೆ ಆತ್ಮೀಯ ಬೀಳ್ಕೊಡುಗೆ

ಮೈಸೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಿ.ವೆಂಕಟರಾಜು ಅವರನ್ನು ಇಲಾಖೆಯಿಂದ ಇತ್ತೀಚೆಗೆ ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಡಲಾಯಿತು.

ಪಡುವಾರಳ್ಳಿಯಲ್ಲಿರುವ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಮಾತನಾಡಿ, ವೆಂಕಟರಾಜು ಅವರು ನಮ್ಮ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರು ಇಲಾಖೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಯಾವುದೇ ಜಯಂತಿಗಳಾಗಲಿ ಕಾರ್ಯಕ್ರಮಗಳಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ.ಮಲ್ಲೇಶ್ ಮಾತನಾಡಿ, ಕೆಲಸಕ್ಕೆ ಸೇರಿದ ದಿನವೇ ನಿವೃತ್ತಿ ದಿನವು ಗೊತ್ತಾಗಿರುತ್ತದೆ. ವೆಂಕಟರಾಜು ಅವರು ಉತ್ತಮ ಕೆಲಸಗಾರರಾಗಿದ್ದರು. ಸ್ನೇಹ ಬಳಗವನ್ನೇ ಕಟ್ಟಿಕೊಂಡಿದ್ದವರು ಅವರಿಗೆ ಅವರ ಕುಟುಂಬದವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

ವಿ. ವೆಂಕಟರಾಜು ಮಾತನಾಡಿ, 35 ವರ್ಷ ಇಲಾಖೆಯಲ್ಲಿ ಕೆಲಸ ಮಾಡಲು ಸಹಕರಿಸಿದ ಎಲ್ಲ ಅಧಿಕಾರಿಗೆ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.

ಸಹಾಯಕ ನಿರ್ದೇಶಕ ಜನಾರ್ದನ್, ವಿವಿಧ ಅಧಿಕಾರಿ, ಸಿಬ್ಬಂದಿ ಪುಟ್ಟಯ್ಯ ಸುಲೋಚನಾ, ಶ್ರೀನಿವಾಸ್‌ಪ್ರಸಾದ್, ರಮೇಶ್, ಚಿಕ್ಕೀರಯ್ಯ, ನಂಜಪ್ಪ, ಹೇಮಚಂದ್ರ, ಕಾಂತರಾಜ್, ಜಗದೀಶ್, ವೆಂಕಟರಾಜು ಪತ್ನಿ ಮಂಜುಳಾದೇವಿ, ಮಕ್ಕಳಾದ ನಿರಂಜನ್‌ಕುಮಾರ್, ಪ್ರಫುಲ್ಲಾ, ಸಾಧನಾ, ಪಲ್ಲವಿ ಇದ್ದರು. ಇದೇ ಸಂದರ್ಭದಲ್ಲಿ ನಿವೃತ್ತರಾದ ನಾರಾಯಣಗೌಡ, ನಾಗರತ್ನಮ್ಮ ಅವರನ್ನು ಅಭಿನಂದಿಸಲಾಯಿತು.