ವಿಜಯಪುರ: ಜನರು ವರ್ಷಕೊಮ್ಮೆಯಾದರೂ ರಕ್ತದೊತ್ತಡ, ಮಧುಮೇಹ ಮತ್ತು ರಕ್ತದ ಕ್ರಿಯಾಟಿನೈನ್ ಪರೀೆ ಮಾಡುವುದರಿಂದ ಮೂತ್ರಪಿಂಡ ವೈಫಲ್ಯಗಳನ್ನು ಶ್ರೀವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಡಾ. ಬಿ.ಎಸ್. ಪಾಟೀಲ ತಿಳಿಸಿದರು.
ನಗರದ ಆಲ್ ಅಮೀನ್ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಕಿಡ್ನಿ ಕಸಿಯ ಮಹತ್ವದ ಕುರಿತು ಮತ್ತು ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಣಿಪಾಲ್ ಆಸ್ಪತ್ರೆಯ ನುರಿತ ವೈದ್ಯ, ಕಿಡ್ನಿ ಕಸಿ ತಜ್ಞ ಡಾ. ಅವಿನಾಶ ಓದುಗೌಡರ ಮಾತನಾಡಿ, ಕಿಡ್ನಿ ಮಹತ್ವ ಹಾಗೂ ಜನರಿಗೆ ಇರುವ ಮೂಢನಂಬಿಕೆ, ತಪ್ಪು ತಿಳಿವಳಿಕೆ ಬಗ್ಗೆ ವಿವರಣೆ ನೀಡಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಮೆಹಬೂಬ್ ಕಲಬುರ್ಗಿ ನೂತನವಾಗಿ ನಿರ್ಮಿಸಿದ ಯೂರಾಲಜಿ ವಿಭಾಗದ ಪುರುಷ ಹಾಗೂ ಮಹಿಳೆಯ ವಾರ್ಡ್ಗಳನ್ನು ಉದ್ಘಾಟಿಸಿದರು. ಆಸ್ಪತ್ರೆ ಅಧ್ಯಕ್ಷ ಡಾ. ಜಿಲಾನಿ ಅವಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸರ್ಜರಿ ವಿಭಾಗದ ಮುಖ್ಯಸ್ಥೆ ಡಾ. ಸಾಜಿದ್ ಮುಧೋಳ, ಡಾ. ನಿಶಿಕಾಂತ ಗುಜ್ಜರ, ಡಾ. ಸುರೇಂದ್ರ ಅಗರ್ವಾಲ, ಡಾ. ಯುನಿಸ್ ಖಾದ್ರಿ, ಆಫ್ರಿನ್ ಜಮಾದಾರ್, ಯುರೋಲಜಿ ವಿಭಾಗದ ಮುಖ್ಯಸ್ಥ ಡಾ. ಸುರೇಶ ಕಾಗಲಕರ, ಡಾ. ಅಶೋಕ ಬಿರಾದಾರ ಮತ್ತಿತರರಿದ್ದರು.