ನೆಲಮಂಗಲ : ಮಹಿಳೆಯರಿಗೆ ಪ್ರತಿಯೊಂದು ೇತ್ರದಲ್ಲೂ ಕಾಂಗ್ರೆಸ್ ಶಕ್ತಿ ತುಂಬುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯೆ ಎಚ್.ನಾಗರತ್ನಮ್ಮ ತಿಳಿಸಿದರು. ನಗರದ ಬಸ್ ನಿಲ್ದಾಣ ಬಳಿ ಆಯೋಜಿಸಿದ್ದ ಸ್ತ್ರೀ ಸ್ವಾವಲಂಬಿ ದಿನಾಚರಣೆಯಲ್ಲಿ ಸಿಹಿ ವಿತರಿಸಿ ಮಾತನಾಡಿದರು. ಕಾಂಗ್ರೆಸ್ ಎಲ್ಲ ವರ್ಗದ ಜನರಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಜತೆಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆದುಕೊಂಡಿದೆ. ಎರಡೂವರೆ ವರ್ಷದಲ್ಲಿ ಶಕ್ತಿ ಯೋಜನೆಯಡಿ ಇದುವರೆಗೆ ರಾಜ್ಯಾದ್ಯಂತ ಮಹಿಳೆಯರು 500 ಕೋಟಿ ಬಾರಿ ಬಸ್ನಲ್ಲಿ ಸಂಚರಿಸಿದ್ದಾರೆ. ಇದು ದೇಶದಲ್ಲಿಯೇ ದೊಡ್ಡ ದಾಖಲೆ. ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ತಾಲೂಕಿನಲ್ಲಿ 1.20ಕೋಟಿ ಬಾರಿ ಮಹಿಳೆಯರು ಸಂಚಾರ ಮಾಡಿದ್ದು ದಾಖಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು ಮಾತನಾಡಿ, ಮಹಾತ್ಮಗಾಂಧಿ ಆಶಯದಂತೆ ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್ ಅನುವು ಮಾಡಿಕೊಟ್ಟಿತು. ರಾಜ್ಯ ಸರ್ಕಾರ ವಿಶೇಷವಾಗಿ ಬಡವರ ಪರವಾಗಿ ಬಹುತೇಕ ಯೋಜನೆ ಜಾರಿಗೊಳಿಸಿದೆ. ಅದ್ದರಂತೆ ಶಾಸಕ ಎನ್.ಶ್ರೀನಿವಾಸ್ ಅವರು ೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದರು.
ದೇವರ ದರ್ಶನ : ನಗರದ ಬಸ್ ನಿಲ್ದಾಣದಲ್ಲಿ ಬಸ್ಗೆ ವಿಶೇಷ ಪೂಜೆ ಸಲ್ಲಿಸಿ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ನಗರದ ಸೊಂಡೇಕೊಪ್ಪ ಮುಖ್ಯರಸ್ತೆಯಲ್ಲಿರುವ ಬಯಲು ಉದ್ಭವ ಶ್ರೀ ವಿನಾಯಕ ಸ್ವಾಮಿ ದರ್ಶನ ಪಡೆದುಕೊಂಡರು. ನಿಟಕಪೂರ್ವ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಪ್ರದಿಪ್, ನರಸಿಂಹಮೂರ್ತಿ, ಲೋಲಾಗಂಗಾಧರ್, ಪುರುಷೋತ್ತಮ್, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲಿಟರಿ ಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನರಸಿಂಹರಾಜು, ಟಕ ವ್ಯವಸ್ಥಾಪಕ ರಾಮಕೃಷ್ಣರೆಡ್ಡಿ, ಸಹಾಯಕ ಸಂಚಾರ ಅಧೀಕ್ಷಕ ಲ್ಮಗೌಡ, ಸಂಚಾರ ನಿರೀಕ್ಷಕ ಗಂಗಾಧರ್, ಮುಖಂಡ ಬಿನ್ನಮಂಗಲ ವೆಂಕಟೇಶ್, ನಾಗರಾಜು, ರಮೇಶ್, ಲಕ್ಷ$್ಮಮ್ಮ ಮುನಿರಾಜು, ಹನುಮಂತಮ್ಮ, ರುಕ್ಮಿಣಿ ಇದ್ದರು.