ಕಿಕ್ಕೇರಿ: ಪರಿವರ್ತನೆ ಜಗದ ನಿಯಮ ಎಂದು ಬದುಕಿನಲ್ಲಿಯೇ ತೋರಿಸಿಕೊಟ್ಟ ಮಹಾನ್ ಸಮಾಜ ಪರಿವರ್ತಕ ಮಹರ್ಷಿ ವಾಲ್ಮೀಕಿ ಎಂದು ಸಮಾಜ ಸೇವಕ ನಂದನ್ ಪುಟ್ಟಣ್ಣ ಹೇಳಿದರು.
ಪಟ್ಟಣದಲ್ಲಿ ಕನ್ನಡ ಕಲಾ ಸಂಘ, ಸ್ಪಂದನಾ ಫೌಂಡೇಷನ್‌ನಿಂದ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೇಷ್ಠ ವ್ಯಕ್ತಿಗಳೆಲ್ಲರೂ ತಮ್ಮ ಸಾಧನೆಯಿಂದ ಬಲುದೊಡ್ಡ ವ್ಯಕ್ತಿಗಳಾಗಿದ್ದಾರೆ. ಸಮಾಜದ ಹಿಂದುಳಿದ ಸಮುದಾಯದಲ್ಲಿಯೇ ಬಹುತೇಕರು ಹುಟ್ಟಿ ನಾಡಿಗೆ ಅಮೂಲ್ಯ ಕಾಣಿಕೆ ನೀಡಿದ್ದಾರೆ ಎನ್ನುವುದಕ್ಕೆ ಆದಿಕವಿ ವಾಲ್ಮೀಕಿ ಜೀವನ ಚರಿತ್ರೆಯೇ ಸಾಕ್ಷಿಯಾಗಿದೆ. ನಾರದ ಮುನಿಗಳ ಉಪದೇಶದಿಂದ ರಾಮನಾಮ ಪಠಿಸುತ್ತ ಬೇಡನಾದ ರತ್ನಾಕರ ಮಹಾನ್ ದಾರ್ಶನಿಕ, ಋಷಿಮುನಿಗಳಾದರು ಎಂದು ಸ್ಮರಿಸಿದರು.
ಸಮಾಜ ಸೇವಕ ಶ್ರೀನಿವಾಸ್ ಪುಟ್ಟಣ್ಣ ಮಾತನಾಡಿದರು. ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ವಾಲ್ಮೀಕಿಯ ರಾಮಾಯಣ ಕುರಿತು ಗುಣಗಾನ ಮಾಡಿದರು. ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸ್ಮರಿಸಲಾಯಿತು. ಸ್ಪಂದನಾ ಟ್ರಸ್ಟಿ ತ್ರಿವೇಣಿ, ಕವಿತಾ ಇದ್ದರು.