ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿಯಲ್ಲಿ ಭಾಗವಹಿಸಿದ್ದ ಬಿ.ವೈ.ರಾಘವೇಂದ್ರ ಅವರನ್ನು ಬಂಜಾರ ಸಮಾಜದ ಹೆಣ್ಣು ಮಕ್ಕಳು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಸವಿತಾ, ರಾಮಾ ನಾಯ್ಕ, ನಾನ್ಯ ನಾಯ್ಕ ಇತರರಿದ್ದರು. 
ಜಿಲ್ಲೆ

ದಿಕ್ಕು ತೋರಿಸಿದ ಮಹಾನ್ ಸಂತ: ಬಿವೈಆರ್

ಅರವಿಂದ ಅಕ್ಲಾಪುರ

ಶಿವಮೊಗ್ಗ: ಬಂಜಾರ ಸಮಾಜಕ್ಕೆ ಸ್ಪಷ್ಟ ದಿಕ್ಕು ತೋರಿ ಸಮಾಜವನ್ನು ಸಂಘಟಿಸಿದ ಮಹಾನ್ ಸಂತ ಸೇವಾಲಾಲ್‌ರು ಪ್ರಾತಃಸ್ಮರಣೀಯರು. ಅವರ ಮಾರ್ಗದರ್ಶನದಲ್ಲಿ ಇಂದು ಬಂಜಾರ ಸಮಾಜ ಸದೃಢವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಸೂರಗೊಂಡನಕೊಪ್ಪದಲ್ಲಿ ಏರ್ಪಡಿಸಿದ್ದ ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿ, ಬಂಜಾರ ಸಮಾಜದವರು ಶ್ರಮ ಜೀವಿಗಳು. ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಬಂಜಾರರು. ಈ ಸಮಾಜದಲ್ಲಿ ಇನ್ನೂ ಕೆಲವು ಸಮಸ್ಯೆಗಳಿವೆ. ಅದನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸೂರಗೊಂಡನಕೊಪ್ಪದ ಅಭಿವೃದ್ಧಿಗೆ ಅಂದು ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪನವರು ಹೆಚ್ಚಿನ ಅನುದಾನ ನೀಡಿದ್ದರು. ಈ ಕ್ಷೇತ್ರ ಇಂದು ಸಮಗ್ರವಾಗಿ ಅಭಿವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ-ಶಿಕಾರಿಪುರ ನಡುವೆ ರೈಲ್ವೆ ಸಂಪರ್ಕವಾದಾಗ ಇಲ್ಲಿ ರೈಲಿನ ನಿಲುಗಡೆ ಕಲ್ಪಿಸಲಾಗುವುದು ಎಂದರು. ಬಂಜಾರ ಸಮಾಜದ ಮುಖಂಡರಾದ ನಾನ್ಯ ನಾಯ್ಕ, ರಾಮಾ ನಾಯ್ಕ, ಸವಿತಾ ಇತರರಿದ್ದರು.