ಸಿಂಧನೂರು: ದುರ್ಬಲರಿಗೆ ಬೆಳಕು ನೀಡಿದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಜನರ ಜೀವವಾಗಿದ್ದಾರೆ ಎಂದು ಸಿಪಿಐ(ಎಂಎಲ್) ರೆಡ್‌ಸ್ಟಾರ್ ಪಕ್ಷದ ರಾಜ್ಯ ಘಟಕ ಸದಸ್ಯ ಎಂ.ಗಂಗಾಧರ ಹೇಳಿದರು.
ಇದನ್ನೂ ಓದಿ:ವಿಶ್ವದಾದ್ಯಂತ ಅಂಬೇಡ್ಕರ್ ಜಯಂತಿ ಆಚರಣೆ
ನಗರದ ತಾಪಂ ಆವರಣದಲ್ಲಿ ಸಿಪಿಐಎಂಎಲ್ ರೆಡ್‌ಸ್ಟಾರ್ ಹಾಗೂ ರೈತ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಾತುರ್ವರ್ಣದ ಬೇರು ಜಾತಿ ವ್ಯವಸ್ಥೆಯಲ್ಲಿದೆ. ಜಾತಿ ವ್ಯವಸ್ಥೆಯ ಬೇರು ಬ್ರಾಹ್ಮಣವಾದದಲ್ಲಿದೆ. ಬ್ರಾಹ್ಮಣವಾದದ ಬೇರು ರಾಜಕೀಯ ಅಧಿಕಾರದಲ್ಲಿದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಅಂಬೇಡ್ಕರ್ ಅವರು ಆರ್‌ಎಸ್‌ಎಸ್‌ನ ಅತಿ ದೊಡ್ಡ ಸೈದ್ಧಾಂತಿಕ ಶತ್ರುವಾಗಿದ್ದರು. ದಲಿತ ಹಾಗೂ ಶೋಷಿತರಿಗೆ ದೇಶದ 43 ಕೋಟಿ ಎಕರೆ ಭೂಮಿಯಲ್ಲಿ 9 ಕೋಟಿ ಎಕರೆ ಭೂಮಿಯನ್ನು ಬಿಟ್ಟು ಕೊಡಲು ಬಾಬಾ ಸಾಹೇಬರು ಹೋರಾಡಿದ್ದರು ಎಂದರು. ಪ್ರಮುಖರಾದ ಎಚ್.ಆರ್.ಹೊಸಮನಿ, ಮುದಿಯಪ್ಪ, ಧರಗಯ್ಯ, ಯಮನೂರ ಮೈಲಾರಿ, ಮಹಾರಾಜ, ತುಳಸಮ್ಮ, ಸಂಗಮ್ಮ, ಹಂಪಮ್ಮ, ಕಮಲಮ್ಮ ಇತರರಿದ್ದರು.