ಹೊಸಕೋಟೆಯ ತಾಲೂಕು ಕಚೇರಿಯಲ್ಲಿರುವ ಶ್ರೀ ಕೃಷ್ಣ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶಾಸಕ ಶರತ್​ ಬಚ್ಚೇಗೌಡ ವಿಶೇಷ ಪೂಜೆ ಸಲ್ಲಿಸಿದರು. ಯಾದವ ಸಂದ ಅಧ್ಯಕ್ಷ ಆನಂದಪ್ಪ, ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ ಗೌಡ, ಎಲ್​ ಆ್ಯಂಡ್​ ಟಿ.ಮಂಜುನಾಥ್​, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವ್​ ಮೂರ್ತಿ, ನಿರ್ದೇಶಕ ಕೊರಳೂರು ಸುರೇಶ್​ ಇದ್ದರು. 
ಜಿಲ್ಲೆ

ಪ್ರಪಂಚದ ಉದ್ಧಾರಕ್ಕೆ ಮಹಾನ್​ ಗ್ರಂಥ ಕೊಡುಗೆ

ಹೊಸಕೋಟೆ: ನೂತನ ಯಾದವ ಸಮುದಾಯ ಭವನದಲ್ಲಿ ಮುಂದಿನ ವರ್ಷ ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಗುವುದು ಎಂದು ಕಿಯೋನಿಕ್ಸ್​ ಅಧ್ಯಕ್ಷ ಹಾಗೂ ಶಾಸಕ ಶರತ್​ಬಚ್ಚೇಗೌಡ ತಿಳಿಸಿದರು. ತಾಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಕೃಷ್ಣ ಕೇವಲ ಹಿಂದು ಧರ್ಮಕ್ಕೆ, ಭಾರತಕ್ಕೆ ಸೀಮಿತವಾಗದೆ ಇಡೀ ಪ್ರಪಂಚಕ್ಕೆ ಸುಂದರವಾಗಿ ಜೀವಿಸುವ ಮಹಾನ್​ ಗ್ರಂಥ ಭಗವದ್ಗೀತೆ ನೀಡಿದ್ದಾನೆ. ದುಖ@, ಕೋಪ, ಮೋಸವನ್ನು ವರ್ಜಿಸಿ ಶಾಂತಿ ನೆಮ್ಮದಿ ಜೀವನ ಸಾಗಿಸುವ ಸುಲಭ ಮಾರ್ಗ ನೀಡಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಪ್ರಸಾದ್​ ಮಾತನಾಡಿ, ಸಮಾಜದಲ್ಲಿ ಅಧರ್ಮ, ಕ್ರೌರ್ಯ ಅಶಾಂತಿ ಹೆಚ್ಚಾದಾಗ ಅದನ್ನು ಧಮನಿಸಲು ಶ್ರೀ ಕೃಷ್ಣ ಅವತಾರ ಎತ್ತಿ ಬರುತ್ತಾನೆ ಎಂದು ನಾವೆಲ್ಲಾ ಮಹಾಭಾರತದಲ್ಲಿ ಕೇಳಿದ್ದೇವೆ. ಅದಕ್ಕನುಗುಣವಾಗಿ ಭಗವದ್ಗೀತೆಯನ್ನು ಪ್ರಪಂಚದ ಉದ್ಧಾರಕ್ಕೆ ಕೊಡುಗೆ ನೀಡಿದ್ದಾನೆ ಎಂದು ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಮುಖಂಡರಾದ ಬಿ.ವಿ.ಬೈರೇಗೌಡ, ರಾಮೇಗೌಡ, ನಗರಸಭೆ ಆಯುಕ್ತ ನೀಲಾ ಲೋಚನ ಪ್ರಭು, ಇತರರು ಇದ್ದರು.