ಜಿಲ್ಲೆ

ಸಿಎಫ್‌ಆರ್ ಫಂಡ್‌ನಿಂದ 6ಕೋಟಿ ರೂ.ಅನುದಾನ ಮಂಜೂರು : ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾಹಿತಿ : ಮರುಡಾಂಬರೀಕಣ ಕಾಮಗಾರಿಯ ಶಿಲಾನ್ಯಾಸ

ಬೆಳ್ತಂಗಡಿ: ಸಂಸದನಾದ ಬಳಿಕ ಬೆಳ್ತಂಗಡಿ ವಿಧಾನಸಭಾಕ್ಷೇತ್ರದಲ್ಲಿ ಮೊದಲ ಕಾಮಗಾರಿಯ ಶಿಲಾನ್ಯಾಸ ನೆರವೇರಿಸುತ್ತಿದ್ದೇನೆ. ಕೇಂದ್ರ ಸರ್ಕಾರದ ಸಿಎಫ್‌ಆರ್ ಫಂಡ್‌ನಿಂದ 6 ಕೋಟಿ ರೂ. ಅನುದಾನ ಮಂಜೂರಾಗಿದ್ದು ಶೀಘ್ರ ಕಾಮಗಾರಿ ನಡೆಯಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಮಂಗಳವಾರ ಗುರುವಾಯನಕೆರೆಯ ಕುಲಾಲ ಮಂದಿರದ ಬಳಿ ಗುರುವಾಯನಕೆರೆಯಿಂದ ಉಪ್ಪಿನಂಗಡಿ ತನಕದ ಲೋಕೋಪಯೋಗಿ ಇಲಾಖೆ ರಸ್ತೆ ಮರುಡಾಂಬರೀಕಣ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಉಜಿರೆಯಿಂದ ಪೆರಿಯ ಶಾಂತಿವರೆಗಿನ ಹೆದ್ದಾರಿ ರಸ್ತೆ ಟೆಂಡರ್ ಮೊಗೇರೋಡಿ ಕನ್‌ಸ್ಟ್ರಕ್ಷನ್‌ಗೆ ಫೈನಲ್ ಆಗಿದೆ. ಜಿಲ್ಲೆಗೆ ಮಂಜೂರಾದ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಬೆಳ್ತಂಗಡಿ ಕ್ಷೇತ್ರಕ್ಕೆ ನೀಡಿದ್ದೇನೆ. ಇದನ್ನು ಇಂದಬೆಟ್ಟುನಲ್ಲಿ ತೆರೆಯುವ ಬಗ್ಗೆ ಚಿಂತನೆ ನಡೆದಿದ್ದು, ಜಾಗ ಗುರುತಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಎನ್‌ಒಡಿ ಕೊಟ್ಟಿಲ್ಲ. ಅದು ಸರಿಯಾದ ಬಳಿಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶಶಿಧರ ಶೆಟ್ಟಿ ಬರೋಡ ನವಶಕ್ತಿ, ಕುವೆಟ್ಟು ಗ್ರಾಪಂ ಅಧ್ಯಕ್ಷೆ ಭಾರತಿ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಪ್ರಮುಖರಾದ ಈಶ್ವರ ಭೈರ, ವಸಂತಿ ಮಚ್ಚಿನ, ಮಹಾಬಲ ಗೌಡ, ಉಮೇಶ್ ಕುಲಾಲ್, ರಕ್ಷಿತ್ ಪಣೆಕ್ಕರ್, ಮಂಜುನಾಥ ಕುಂಬ್ಳೆ, ಕಾಂತಪ್ಪ ಗೌಡ, ಆಶಾಲತಾ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ರಾಜ್‌ಪ್ರಕಾಶ್ ಶೆಟ್ಟಿ, ರಾಜೇಶ್ ಕುಲಾಲ್ ಮಾಲಾಡಿ, ಸಂತೋಷ್ ಭಾರ್ಗವಿ, ನವೀನ್ ನೆರಿಯ, ಸುಂದರ ಹೆಗ್ಡೆ ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಕುವೆಟ್ಟು ಗ್ರಾಪಂ ಅಧ್ಯಕ್ಷೆ ಭಾರತಿ ಎಸ್.ಶೆಟ್ಟಿ ವಂದಿಸಿದರು.

ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ಮಂಜೂರುಗೊಂಡ ಅನುದಾನದಲ್ಲಿ 10 ಕಿ.ಮೀ.ವರೆಗೆ ಅಂದರೆ ಪಿಲಿಗೂಡು ತನಕ ಮರುಡಾಂಬರೀಕರಣ ಆಗುತ್ತದೆ. ನಂತರ ಒಂದಷ್ಟು ಭಾಗ ಉಳಿಯುತ್ತದೆ. ಈಗಾಗಲೇ ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಅದನ್ನು ಮುಂದುವರಿದ ಕಾಮಗಾರಿಯಲ್ಲಿ ಸೇರಿಸಿ ಅನುದಾನ ಕೊಡಬೇಕೆಂದು ಮನವಿ ಮಾಡಿದ್ದೇನೆ. ಅನುದಾನ ಬರಬಹುದು ಎಂಬ ವಿಶ್ವಾಸ ಇಟ್ಟುಕೊಂಡಿದ್ದೇನೆ. ಹರೀಶ್ ಪೂಂಜ, ಬೆಳ್ತಂಗಡಿ ಶಾಸಕ https://www.vijayavani.net/mukham-urus-in-nekkittadka https://www.vijayavani.net/appeal-to-minister-for-new-court-building-in-belthangadi