ಜಿಲ್ಲೆ

ಹಿರೇಕೆರೂರಲ್ಲಿ ಶ್ರೀ ಸಿದ್ಧಾರೂಢ ಜ್ಯೋತಿ ಯಾತ್ರೆಗೆ ಭವ್ಯ ಸ್ವಾಗತ

ಹಿರೇಕೆರೂರ: ರಾಜ್ಯಾದ್ಯಂತ ಸಂಚರಿಸುತ್ತಿರುವ ಶ್ರೀ ಸಿದ್ಧಾರೂಢ ಜ್ಯೋತಿ ಯಾತ್ರೆಯನ್ನು ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಸಿದ್ಧಾರೂಢ ಭಕ್ತಿ ಮಂಡಳಿಯವರು ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿದರು.

ಸಿದ್ಧಾರೂಢ ಸ್ವಾಮಿಗಳ 190ನೇ ಹಾಗೂ ಶ್ರೀ ಗುರುನಾಥರೂಢರ 115ನೇ ಜಯಂತಿ ಮತ್ತು ಶ್ರೀ ಸಿದ್ಧಾರೂಢರ ಕಥಾಮೃತ ಶತಮಾನೋತ್ಸವದ ನಿಮಿತ್ತ ರಾಜ್ಯಾದ್ಯಂತ ಸಿದ್ಧಾರೂಢ ಜ್ಯೋತಿ ಯಾತ್ರೆಯು ಸಂಚರಿಸುತ್ತಿದೆ. ಹಿರೇಕೆರೂರ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಆಗಮಿಸುತ್ತಿದ್ದಂತೆ ಭಕ್ತರು ಹೂವಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.

ಪಟ್ಟಣದ ಸರ್ವಜ್ಞ ವೃತ್ತದಿಂದ ಆರಂಭಗೊಂಡ ಜ್ಯೋತಿ ಯಾತ್ರೆಯು ಪಾಲಕಿ ಉತ್ಸವದೊಂದಿಗೆ ಮಾತೆಯರು ಪೂರ್ಣಕುಂಭ, ಸಾಂಸ್ಕೃತಿಕ, ಕಲಾ ತಂಡ ವಾದ್ಯ ಹಾಗೂ ಸಿದ್ಧಾರೂಢರ ಕಥಾಮೃತದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು. ಪಟ್ಟಣದ ಮುಖ್ಯ ರಸ್ತೆಯ ಮೂಲಕ ಸಂಚರಿಸಿ ಚಾವಡಿ ವೃತ್ತದಲ್ಲಿನ ಕೋಟೆ ಆಂಜನೇಯ ದೇವಸ್ಥಾನ ತಲುಪಿತು. ನಂತರ ಅನ್ನ ಸಂತರ್ಪಣೆ ನೆರವೇರಿತು.

ಭಕ್ತರಾದ ಮಹೇಂದ್ರ ಬಡಳ್ಳಿ, ಹನುಮಂತ ಕುರಬರ, ಹರೀಶ ಕಲಾಲ, ರಾಜಶೇಖರ ಹಂಪಾಳಿ, ಗುರುಮೂರ್ತಿ ನಾಡಿಗೇರೆ, ಸತೀಶ ನಾಡಿಗೇರ, ಕಂಠಾಧರ ಅಂಗಡಿ, ವಿ.ಸಿ. ಮುದಿಗೌಡ್ರ, ಗುರುಶಾಂತ ಯತ್ತಿನಹಳ್ಳಿ, ಮಂಜುನಾಥ ತಂಬಾಕದ, ರಾಜು ತಿಪ್ಪಶೆಟ್ಟಿ, ಇಂದುಧರ ಹಿರೇಮಠ, ರುದ್ರೇಶ ಬೇತೂರ, ಮನೋಹರ ವಡ್ಡಿನಕಟ್ಟಿ, ಬಿ.ಆರ್. ಪುಟ್ಟಣ್ಣನವರ, ಉಮೇಶ ಬಣಕಾರ, ರುದ್ರಪ್ಪ ಶೆಟ್ಟರ, ಕುಮಾರ ಶಿರಳ್ಳಿ ಹಾಗೂ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಶ್ರೀ ಸಿದ್ಧಾರೂಢ ಭಕ್ತ ಮಂಡಳಿಯವರು ಇದ್ದರು.