ಹುಣಸೂರು ನಗರಕ್ಕೆ ಆಗಮಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಚಾರ ರಥವನ್ನು ತಾಲೂಕು ಬ್ರಾಹ್ಮಣ ಸಭಾದ ಮುಖಂಡರು ಸ್ವಾಗತಿಸಿದರು. ಅಧ್ಯಕ್ಷ ಭಾಸ್ಕರ್ ಭಟ್, ನಾಗರಾಜ್, ಸತ್ಯವತಿ, ಕಮಲಮ್ಮ ಇದ್ದರು. 
ಜಿಲ್ಲೆ

ಬ್ರಾಹ್ಮಣ ಸಭಾದ ಪ್ರಚಾರ ರಥಕ್ಕೆ ಭವ್ಯ ಸ್ವಾಗತ

ಹುಣಸೂರು: ಬೆಂಗಳೂರಿನಲ್ಲಿ ಜ.18 ಮತ್ತು 19ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ ಮತ್ತು 11ನೇ ಬ್ರಾಹ್ಮಣ ಮಹಾಸಮ್ಮೇಳನ ನಡೆಯಲಿದ್ದು, ಇದರ ಭಾಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಪ್ರಚಾರ ರಥ(ವಿಶ್ವಾಮಿತ್ರ)ಕ್ಕೆ ಹುಣಸೂರಿನಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಮಂಗಳವಾರ ನಗರದ ಬ್ರಾಹ್ಮಣರ ಬೀದಿಯ ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ವಿಪ್ರ ಬಂಧುಗಳು ರಥಕ್ಕೆ ಪುಷ್ಪನಮನ ಸಲ್ಲಿಸಿ ಪೂಜೆ ನೆರವೇರಿಸಿದರು.

ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಭಾಸ್ಕರ್ ಭಟ್ ಮಾತನಾಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ಈಗ 50ರ ಸಂಭ್ರಮ. ಸೂಕ್ಷ್ಮಾತಿಸೂಕ್ಷ್ಮ ಸಮುದಾಯವಾಗಿ ಇಂದಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ದೇಶಕ್ಕಾಗಿನ ದುಡಿಮೆಯನ್ನು ಉಳಿಸಿಕೊಂಡು ಹೋಗಬೇಕಿದೆ. ಈ ನಿಟ್ಟಿನಲ್ಲಿ ಮಹಾ ಸಮ್ಮೇಳನದ ಯಶಸ್ಸಿಗೆ ತಾಲೂಕು ಮಹಾಸಭಾ ಎಲ್ಲರೊಡಗೂಡಿ ಭಾಗವಹಲಿಸಲಿದೆ ಎಂದರು.

ಮಾಜಿ ಅಧ್ಯಕ್ಷ ವೆಂಕಟರಮಣದಾಸ್ ಮಾತನಾಡಿ, ಮಹಾಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ವಿಪ್ರ ಸಮಾಜ ಭಾಗವಹಿಸಲು ತೀರ್ಮಾನಿಸಿದೆ. ಮಹಾಸಭಾಕ್ಕೆ 50ರ ಸುವರ್ಣ ಸಂಭ್ರಮ ಅಚರಿಸುತ್ತಿರುವ ಈ ಸುಸಂದರ್ಭದಲ್ಲಿ ನಾವೆಲ್ಲರೂ ಪಾಲ್ಗೊಂಡು ಸಮ್ಮೇಳನಕ್ಕೆ ಸಾಕ್ಷೀಯಾಗಬೇಕಿದೆ ಎಂದರು.

ಮುಖಂಡರಾದ ಆಡಿಟರ್ ನಾಗರಾಜ್, ಭಾಸ್ಕರ್, ನಾಗಭೂಷಣ್, ವಾಸುಕಿ, ವಿಪ್ರ ಮಹಿಳಾ ಸಂಘದ ಸತ್ಯವತಿ, ಕಮಲಮ್ಮ ಇತರರು ಹಾಜರಿದ್ದರು.ರಥವು ಚಿಲ್ಕುಂದ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ಬೀಳ್ಕೊಡಲಾಯಿತು.