ಮಹಾಲಿಂಗಪುರ ಪಟ್ಟಣಕ್ಕೆ ಆಗಮಿಸಿದ್ದ ಸಿದ್ಧಾರೂಢರ ಜ್ಯೋತಿ ಯಾತ್ರೆಯನ್ನು ಸಹಜಾನಂದ ಶ್ರೀಗಳು, ಸಿದ್ಧಾನಂದ ಭಾರತಿ ಶ್ರಿಗಳು, ಸಿ.ಎಂ.ಕಟಗಿ ಸ್ವಾಗತಿಸಿದರು. 
ಜಿಲ್ಲೆ

ಸಿದ್ಧಾರೂಢರ ಜ್ಯೋತಿಯಾತ್ರೆಗೆ ಭವ್ಯ ಸ್ವಾಗತ

ಮಹಾಲಿಂಗಪುರ: ಸಿದ್ಧಾರೂಢರ ಕಥಾಮೃತ ಶತಮಾನೋತ್ಸವ ಹಾಗೂ ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿನ ವಿಶ್ವ ವೇದಾಂತ ಪರಿಷತ್ ಅಂಗವಾಗಿ ಚಳಕಾಪುರದಿಂದ ಹುಬ್ಬಳ್ಳಿವರೆಗೆ ನಡೆಯುತ್ತಿರುವ ಸಿದ್ಧಾರೂಢರ ಜ್ಯೋತಿ ಯಾತ್ರೆಗೆ ಪಟ್ಟಣದಲ್ಲಿ ಭಾನುವಾರ ಸಂಜೆ ಸ್ವಾಗತ ಕೋರಲಾಯಿತು.

ಬುದ್ನಿ ಪಿಡಿ ಸಿದ್ಧಾರೂಢ, ಮಲ್ಲಮ್ಮ, ವೇಮನ ತ್ರಿವಳಿ ದೇವಸ್ಥಾನದಲ್ಲಿ ಜ್ಯೋತಿ ರಥಕ್ಕೆ ಸಹಜಾನಂದ ಶ್ರೀಗಳು ಪೂಜೆ ಸಲ್ಲಿಸಿದರು. ನಂತರ ಮೆರವಣಿಗೆ ಮೂಲಕ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮಕ್ಕೆ ಸ್ವಾಗತಿಸಲಾಯಿತು. ಯಾತ್ರೆಯು ಡಿ.23ರಂದು ಚಳಕಾಪುರದಿಂದ ಪ್ರಾರಂಭವಾಗಿದ್ದು, ಫೆ.19ರಂದು ಹುಬ್ಬಳ್ಳಿ ತಲುಪಲಿದೆ.

ಭವ್ಯ ಮೆರವಣಿಗೆ

ಸೋಮವಾರ ಬೆಳಗ್ಗೆ 9.30ಕ್ಕೆ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಿಂದ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ, ನಡಚೌಕಿ, ಡಬಲ್ ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಕರಡಿ ಮಜಲು, ಮಹಿಳೆಯರ ಆರತಿಯೊಂದಿಗೆ ಸಿದ್ಧಾರೂಢರ ಜ್ಯೋತಿ ರಥದ ಭವ್ಯ ಮೆರವಣಿಗೆ ನಡೆಸಿ ರನ್ನಬೆಳಗಲಿ-ಮುಧೋಳಕ್ಕೆ ಬೀಳ್ಕೊಡಲಾಯಿತು.

ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಪೀಠಾಧಿಪತಿ ಸಹಜಾನಂದ ಸ್ವಾಮಿಗಳು, ಸಿದ್ಧಾನಂದ ಭಾರತಿ ಸ್ವಾಮಿಗಳು, ಹೊಸೂರಿನ ಪರಮಾನಂದ ಸ್ವಾಮಿಗಳು, ಡಾ.ಬಿ.ಡಿ. ಸೋರಗಾಂವಿ, ಚಂದ್ರಶೇಖರ ಮೋರೆ, ಅಲ್ಲಪ್ಪ ಗುಂಜಿಗಾಂವಿ, ಎಂ.ಎಂ. ಕಟಗಿ, ಚೇತನ ಹಾದಿಮನಿ, ಲಕ್ಕಪ್ಪ ಚಮಕೇರಿ, ಚನ್ನಪ್ಪ ಪಟ್ಟಣಶೆಟ್ಟಿ, ಜಿ.ಎಸ್.ಬರಗಿ, ಶ್ರೀಶೈಲಪ್ಪ ಬಾಡನವರ, ಮಹೇಶ ಇಟಕನ್ನವರ, ಯಲ್ಲನಗೌಡ ಪಾಟೀಲ, ಹಣಮಂತ ಮೀರಾಪಟ್ಟಿ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಮಹೇಶ ಬಡಿಗೇರ, ಗೌಡಪ್ಪಗೌಡ ಪಾಟೀಲ, ಎಂ.ಎಸ್.ಧಡೂತಿ, ಮಹಾಂತೇಶ ಘಟ್ನಟ್ಟಿ ಮತ್ತಿತರರಿದ್ದರು.