ಹಲಗೂರು: ಗ್ರಾಮಕ್ಕೆ ಅಯೋಧ್ಯೆಯಿಂದ ಬಂದ ಶ್ರೀ ರಾಮ ಪ್ರಾಣಾಪ್ರತಿಷ್ಠೆಯ ಮಂತ್ರಾಕ್ಷತೆಗೆ ಗುರುವಾರ ರಾಮಭಕ್ತರು ಭವ್ಯ ಸಾಗತ ಕೋರಿದರು.
ಮುತ್ತತ್ತಿ ರಸ್ತೆಯಲ್ಲಿರುವ ಶ್ರೀ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದ ಶ್ರೀ ರಾಮ ಪ್ರಾಣಾಪ್ರತಿಷ್ಠೆಯ ಮಂತ್ರಾಕ್ಷತೆಗೆ ಅರ್ಚಕರು ಪೂಜೆ ಸಲ್ಲಿಸಿದ ನಂತರ ಪೂರ್ಣಕುಂಬ ಹೊತ್ತ ಮಕ್ಕಳೊಂದಿಗೆ ಮಂತ್ರಾಕ್ಷತೆಯನ್ನು ರಾಮ ಭಕ್ತರು ತಲೆಯ ಮೇಲೆ ಹೊತ್ತು ಶ್ರೀ ರಾಮನಿಗೆ ಜೈಕಾರ ಹಾಕುತ್ತಾ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಈ ವೇಳೆ ಎನ್.ಕೆ.ಕುಮಾರ್ ಮಾತನಾಡಿ, ಹಲಗೂರು ಸೇರಿದಂತೆ ಹೋಬಳಿಯ ಎಲ್ಲ ರಾಮಭಕ್ತರ ಮನೆಗಳಿಗೂ ಈ ಮಂತ್ರಾಕ್ಷತೆಯನ್ನು ತಲುಪಿಸುತ್ತೇವೆ. ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆಯ ದಿನವಾದ ಜ.22ರ ಸಂಜೆ ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ದೀಪ ಬೆಳಗಿಸಬೇಕು ಎಂದು ಮನವಿ ಮಾಡಿದರು.
ಭಕ್ತರಾದ ರಮೇಶ್, ನಂದಿಪುರ ಕುಮಾರ್, ಲ್ಯಾಬ್ ಕೃಷ್ಣೇಗೌಡ, ಗೊಲ್ಲರಳ್ಳಿ ನಾಗೇಶ್, ಗಂಗಾಧರ್, ಚಂದ್ರು, ಮೂರ್ತಿ, ಶಿವಣ್ಣ, ಅಭಿಜಿತ್, ರವಿ ಮೋದಿ, ಅನಂತಸ್ವಾಮಿ, ಶೆಟ್ರು ನಾಗೇಂದ್ರ, ಅರ್ಚಕ ವೀರತಪ್ಪ ಇತರರು ಇದ್ದರು.