ಸೈನಿಕರಾಗಿ ಸೇವೆ ಸಲ್ಲಿಸಿ ಮರಳಿ ತಾಯ್ನಡಿಗೆ ಆಗಮಿಸಿದ ಸೈನಿಕ ಜಿ.ಜೆ. ತ್ರಿಲೋಚನ ಅವರನ್ನು ಗ್ರಾಮಸ್ಥರು ಮುಖಂಡರು ಅಭಿನಂದಿಸಿದರು. ಗೊರವನಹಳ್ಳಿ ಪ್ರಸನ್ನ, ಮಧುಕುಮಾರ್, ಸತೀಶ್, ಅನಿತಾ, ಪ್ರಥಿಮಾವೆಂಕಟೇಶ್, ಕಾಳೆೇಗೌಡ್ರು, ಸಿದ್ದರಾಮು, ಸುರೇಶ್, ಕುಮಾರ್, ರಮೇಶ್‌ರಾವ್ ಇದ್ದರು. 
ಜಿಲ್ಲೆ

ತಾಯ್ನಾಡಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ

ಮದ್ದೂರು : ಸತತ 24 ವರ್ಷಗಳ ಕಾಲ ಸೈನಿಕರಾಗಿ ಸೇವೆ ಸಲ್ಲಿಸಿ ಮರಳಿ ತಾಯ್ನಾಡಿಗೆ ಗಮಿಸಿದ ಸೈನಿಕ ಜಿ.ಜೆ. ತ್ರಿಲೋಚನ ಅವರನ್ನು ಗ್ರಾಮಸ್ಥರು ಸ್ನೇಹಿತರು ಹಾಗೂ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

ಪಟ್ಟಣದ ಶಿವಪುರದ ರೈಲ್ವೆ ನಿಲ್ದಾಣಕ್ಕೆ ಮಂಗಳವಾರ ಆಗಮಿಸಿದ ಯೋಧ ಜಿ.ಜೆ. ತ್ರಿಲೋಚನ ಅವರಿಗೆ ಗ್ರಾಮಸ್ಥರು ಪುಷ್ಪ ಮಳೆಗೈಯುವುದರ ಜತೆಗೆ ಒಂದೇ ಮಾತರಂ, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳ ಮೂಲಕ ಸ್ವಾಗತಿಸಿದರು.

ಬಳಿಕ ತಮ್ಮ ಸ್ವಗ್ರಾಮ ಗೊರವನಹಳ್ಳಿ ಗ್ರಾಮಕ್ಕೆ ಆಗಮಿಸಿದ ಜಿ.ಜೆ ತ್ರಿಲೋಚನ ಅವರನ್ನು ಸ್ಥಳೀಯ ಮುಖಂಡರು ಸಾಂಸ್ಕೃತಿಕ ಕಲಾ ತಂಡಗಳೊಟ್ಟಿಗೆ ತೆರೆದ ವಾಹನದ ಮೂಲಕ ಮೆರವಣಿಗೆ ಮಾಡಿ ವೇದಿಕೆ ಕಾರ್ಯಕ್ರಮಕ್ಕೆ ಕರೆತರಲಾಯಿತು.

ತಾಲೂಕಿನ ಗೊರವನಹಳ್ಳಿ ಗ್ರಾಮದ ಜಯಶಂಕರ ಆರಾಧ್ಯ, ಜಯಮ್ಮ ದಂಪತಿ ಕಿರಿಯ ಪುತ್ರ ಜಿ.ಜೆ ತ್ರಿಲೋಚನ ಸಿಆರ್‌ಪಿಎಫ್‌ನಲ್ಲಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ತಾಯ್ನಡಿಗೆ ಆಗಮಿಸಿದರು. ಬೆಂಗಳೂರು, ತ್ರಿಪುರ, ಆಂಧ್ರಪ್ರದೇಶ, ಶ್ರೀನಗರ, ಕಾಶ್ಮೀರ, ರಾಜಸ್ಥಾನ, ಒಡಿಸ್ಸಾ ಹಾಗೂ ಚಂಡೀಘಡ್‌ನಲ್ಲಿ 13ನೇ ಬೆಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿ.ಜೆ. ತ್ರಿಲೋಚನ, 24 ವರ್ಷಗಳ ಕಾಲ ದೇಶದ ಸೇವೆ ಸಲ್ಲಿಸಿರುವುದು ನನಗೆ ಹೆಮ್ಮೆ ಹಾಗೂ ಸಂತಸದ ಸಂಗತಿಯಾಗಿದೆ. ಪ್ರತಿಯೊಬ್ಬ ಯೋಧನು ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಮೂಲಕ ದೇಶ ಸೇವೆಯಲ್ಲಿ ತೊಡಗಿದ್ದಾರೆಂದು ಹೇಳಿದರು.

ಯೋಧನಷ್ಟೇ ರೈತನು ಮುಖ್ಯವಾಗಿದ್ದು ರಾಜ್ಯದಲ್ಲಿ ಉತ್ತಮ ಮಳೆ ಬಂದು, ರೈತರು ಸಂತೃಪ್ತಿ ಜೀವನ ನಡೆಸಲೆಂದು ದೇವರಲ್ಲಿ ಪ್ರಾರ್ಥಿಸಿದರಲ್ಲದೆ ತಮ್ಮ ಇಷ್ಟು ವರ್ಷಗಳ ಸೇವೆಗೆ ಬೆನ್ನೆಲುಬಾಗಿ ನಿಂತ ಕುಟುಂಬದವರಿಗೆ ಹಿತೈಷಿಗಳಿಗೆ ಸ್ನೇಹಿತರಿಗೆ ಅಭಾರಿಯಾಗಿರುವುದಾಗಿ ತಿಳಿಸಿದರು.

ಮುಖಂಡರಾದ ಗೊರವನಹಳ್ಳಿ ಪ್ರಸನ್ನ, ಮಧುಕುಮಾರ್, ಸತೀಶ್, ಅನಿತಾ, ಪ್ರಥಿಮಾವೆಂಕಟೇಶ್, ಕಾಳೆೇಗೌಡ, ಸಿದ್ದರಾಮು, ಸುರೇಶ್, ಕುಮಾರ್, ರಮೇಶ್‌ರಾವ್, ಹೇಮಾ, ಸಿರಿ ಇತರರು ಹಾಜರಿದ್ದರು.