ಸಿದ್ಧಾರೂಢ ಉಪ್ಪಾರ 
ಜಿಲ್ಲೆ

ನಾಳೆ ಯೋಧನಿಗೆ ಅದ್ದೂರಿ ಸ್ವಾಗತ

ತೇರದಾಳ : ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ, ತವರೂರಿಗೆ ಹಿಂತಿರುಗುತ್ತಿರುವ ಸಿದ್ಧೇಶ್ವರ ಗಲ್ಲಿಯ ಸಿದ್ಧಾರೂಢ ಉಪ್ಪಾರ ಅವರಿಗೆ ಮಾ.1ರಂದು ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9 ಗಂಟೆಗೆ ಯಲ್ಲಮ್ಮ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ. ನಂತರ ಮಲ್ಲಿಕಾರ್ಜುನ ದೇವಸ್ಥಾನ ಸಮುದಾಯ ಭವನದಲ್ಲಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ ಹಾಗೂ ಹಿರೇಮಠದ ಗಂಗಾಧರ ದೇವರು ಸಾನ್ನಿಧ್ಯ ವಹಿಸುವರು.

ನಿವೃತ್ತ ಸೈನಿಕರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಈರಪ್ಪ ತಾರದಾಳ ಅಧ್ಯಕ್ಷತೆ ವಹಿಸುವರು. ಪಿಎಸ್‌ಐ ಅಪ್ಪಣ್ಣ ಐಗಳಿ, ಪುರಸಭೆ ಸದಸ್ಯ ಸಂತೋಷ ಜಮಖಂಡಿ, ನಂದು ಗಾಯಕವಾಡ, ಅಪ್ಪಾಸಾಬ ಮೋಪಗಾರ, ರಮೇಶ ಪಟ್ಟಣಶೆಟ್ಟಿ, ಸುಭಾಸ ಹಳ್ಯಾಳ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.