ಜಿಲ್ಲೆ

ಕುರುಗೋವಿನಕೊಪ್ಪದಲ್ಲಿ ನಿವೃತ್ತ ಯೋಧನಿಗೆ ಸ್ವಾಗತ

ನರಗುಂದ: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 22 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ವೀರಯೋಧ ವೆಂಕರಡ್ಡಿ ನೀಲರಡ್ಡಿ ಭಾನುವಾರ ತವರೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ನರಗುಂದ ತಾಲೂಕು ಮಾಜಿ ಮತ್ತು ಹಾಲಿ ಸೈನಿಕರ ಸಂಘದವರು ಹಾಗೂ ಗ್ರಾಮಸ್ಥರು ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.

ನರಗುಂದ ತಾಲೂಕು ಮಾಜಿ ಸೈನಿಕರ ಸಂಘದ ಸದಸ್ಯ ಬಸವರಾಜ ಕಲಾರಿ ಮಾತನಾಡಿ, ದೇಶ ಬಲಿಷ್ಠವಾಗಬೇಕಾದರೆ ಸೇನೆಯೂ ಬಲಿಷ್ಠವಾಗಿರಬೇಕು. ಸೈನಿಕರಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ, ಸುರಕ್ಷತೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಗ್ರಾಮದ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಬೇಕು. ಅವರಿಗೆ ರಾಷ್ಟ್ರಭಕ್ತಿ, ದೇಶಪ್ರೇಮ ಹಾಗೂ ದೇಶದ ಸುರಕ್ಷತೆ ಬಗ್ಗೆ ತಿಳಿಸಿಕೊಡಬೇಕು ಎಂದರು.

ಹುಣಸೀಕಟ್ಟಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಜಿ.ಎನ್.ದೊಡ್ಡಲಿಂಗಪ್ಪನವರ ಮಾತನಾಡಿ, ನಿವೃತ್ತಿ ಹೊಂದಿದ ಪ್ರತಿಯೊಬ್ಬ ಯೋಧರನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದರು.

ನರಗುಂದ ತಾಲೂಕು ಮಾಜಿ ಸೈನಿಕ ಸಂಘದ ಅಧ್ಯಕ್ಷ ವೆಂಕಪ್ಪ ಭಾವಿ ಮಾತನಾಡಿದರು. ಚಂದ್ರಶೇಖರ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಸದಸ್ಯ ಯಮನಪ್ಪ ತಳವಾರ, ಜಗದೀಶ ದೊಡ್ಡಲಿಂಗಪ್ಪನವರ, ತಾಪಂ ಮಾಜಿ ಸದಸ್ಯ ಗಿರೀಶ ನೀಲರಡ್ಡಿ, ವಿಜಯ ಕೋತಿನ, ರಾಮಪ್ಪ ಕಣಕಿ, ಶಿವನಪ್ಪ ಕಪಲಿ, ಹನುಮಂತಪ್ಪ ಹೂಲಿ, ಗೋವಿಂದರಡ್ಡಿ ನೀಲರಡ್ಡಿ, ಜಗದೀಶ ನಾಯ್ಕರ, ಬಸವರಾಜ ಗಜ್ಜರಿ, ಕಾಶೀಂಸಾಬ್ ಅಗಸರ, ಸುರೇಶ ನೀಲರಡ್ಡಿ, ಭೀಮರಡ್ಡಿ ನೀಲರಡ್ಡಿ, ಸಂತೋಷ ನೀಲರಡ್ಡಿ, ಯೋಧನ ಕುಟುಂಬಸ್ಥರು ಉಪಸ್ಥಿತರಿದ್ದರು.