Oplus_131072 
ಜಿಲ್ಲೆ

ನಂಜನಗೂಡಿನಲ್ಲಿ ಕನ್ನಡ ರಥಕ್ಕೆ ಅದ್ದೂರಿ ಸ್ವಾಗತ

ನಂಜನಗೂಡು: ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥಕ್ಕೆ ಮಂಗಳವಾರ ನಂಜನಗೂಡಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಪಟ್ಟಣದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಆಡಳಿತ ಮತ್ತು ನಂಜನಗೂಡು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಶ್ರೀ ಭುವನೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ಮಾಡಿದರು.

ತಹಸೀಲ್ದಾರ್ ಶಿವಕುಮಾರ್ ಕಾಸನೂರು, ಕನ್ನಡ ಸಾಹಿತ್ಯ ಪರಿಷತ್ ನಂಜನಗೂಡು ತಾಲೂಕು ಅಧ್ಯಕ್ಷೆ ಲತಾ ಮುದ್ದು ಮೋಹನ್, ಶಿಲ್ಪಾ ನಾಗಾಶಯನ, ಸುರೇಖಾ, ಮಂಜುಳಾ, ಪ್ರಭಾಕರ್, ಮಂಜುನಾಥ, ರಂಗಸ್ವಾಮಿ, ಸಿಡಿಪಿಒ ಭವ್ಯಶ್ರೀ, ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್, ಶಿವಣ್ಣ, ಶಿವಕುಮಾರ್ ಇತರರು ಇದ್ದರು.