ಜಿಲ್ಲೆ

ಅಮ್ಮಿನಬಾವಿಯಲ್ಲಿ ಜೀನದೇವಿ ಮಾತಾಜಿಗೆ ಅದ್ದೂರಿ ಸ್ವಾಗತ

ಉಪ್ಪಿನಬೆಟಗೇರಿ: ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ನೇಮಿನಾಥ ದಿಗಂಬರ ಜೈನ ಮಂದಿರಕ್ಕೆ ಮಂಗಳವಾರ ಆಗಮಿಸಿದ ಜೀನದೇವಿ ಮಾತಾಜಿ ಅವರನ್ನು ಜೈನ ಸಮಾಜದವರು ಆತ್ಮೀಯವಾಗಿ ಬರಮಾಡಿಕೊಂಡರು.

ಮಂಗಳವಾರ ಬೆಳಗ್ಗೆ ನವಲಗುಂದ ತಾಲೂಕಿನ ಮೊರಬ ಗ್ರಾಮದಿಂದ ಪಾದಯಾತ್ರೆ ಮೂಲಕ ಆಗಮಿಸಿದ ಮಾತಾಜಿ ನೇತೃತ್ವದ ಸಂಘವು ಜೈನ ಬಸದಿಗೆ ತೆರಳಿ ತೀರ್ಥಂಕರರ ಮೂರ್ತಿಗೆ ಪಂಚಾಮೃತ, ಅಭಿಷೇಕ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಜೈನ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ, ಪಿ.ಎಸ್. ಪತ್ರವಾಳ್ಳಿ, ಶ್ರೇಯಾವಸ ದೇಸಾಯಿ, ಮಂಜುನಾಥ ಅಂಗಡಿ, ಶಂಕರ ರಾಘುನವರ, ಬ್ರಹ್ಮಕುಮಾರ ದೇಸಾಯಿ, ಸಮ್ಮೈದ ಲೋಕೂರ, ಪಮ್ಮಣ್ಣ ಧಾರವಾಡ, ನೇಮಚಂದ್ರ ನವಲೂರ, ಈಶ್ವರ ಗಡೆಗಾಕಾರ, ಮಂಜುನಾಥ ರಾಘುನವರ, ಶೀತಲ ಧಾರವಾಡ, ಜೀನಪ್ಪ ಗಡೆಗಾರ, ಇತರರಿದ್ದರು.