ಎಂ.ಸೀಹಳ್ಳಿ ಗ್ರಾಮದಲ್ಲಿ ಶಕ್ರವಾರ ಶ್ರೀ ತ್ರಿಪುರ ಸುಂದರಿ ಅಮ್ಮನವರ ಬಂಡಿ ಉತ್ಸವ ಅದ್ದೂರಿಯಾಗಿ ನೆರವೇರಿತು. 
ಜಿಲ್ಲೆ

ಸೀಹಳ್ಳಿಯಲ್ಲಿ ಅದ್ದೂರಿ ಬಂಡಿ ಉತ್ಸವ

ತಿ.ನರಸೀಪುರ: ತಾಲೂಕಿನ ಎಂ.ಸೀಹಳ್ಳಿ ಗ್ರಾಮದಲ್ಲಿ ಶಕ್ರವಾರ ಶ್ರೀ ತ್ರಿಪುರ ಸುಂದರಿ ಅಮ್ಮನವರ ಬಂಡಿ ಉತ್ಸವ ಅದ್ದೂರಿಯಾಗಿ ನೆರವೇರಿತು.

ಕನ್ನಹಳ್ಳಿ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಬಂಡಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗ್ರಾಮದ ಬಂಡಿ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮಸ್ಥರು ಬಾಳೆಗೊನೆ, ಹೂವಿನ ಹಾರ ಅರ್ಪಿಸಿ ಪೂಜೆ ಸಲ್ಲಿಸಿದರಲ್ಲದೆ, ಬಂಡಿಯ ಚಕ್ರಕ್ಕೆ ಈಡುಗಾಯಿ ಒಡೆದು ಹರಕೆ ಸಲ್ಲಿಸಿದರು.

ನಂತರ ಬಂಡಿಗೆ ಒಂದು ಬಾರಿಗೆ ಒಂದು ಜೊತೆ ಎತ್ತುಗಳಂತೆ ಹತ್ತಾರು ಜೊತೆ ಎತ್ತುಗಳನ್ನು ಕಟ್ಟಿ ಜೈಕಾರದ ಘೋಷಣೆ ಹಾಗೂ ನಗಾರಿ ಬಾರಿಸುವ ಮೂಲಕ ಸುಮಾರು ಎರಡು ಗಂಟೆಗಳ ಕಾಲ ಬಂಡಿ ಓಡಿಸಲಾಯಿತು. ಬಂಡಿ ಉತ್ಸವ ವೀಕ್ಷಿಸಲು ಸುತ್ತಮುತ್ತಲ ಹತ್ತಾರು ಗ್ರಾಮಗಳ ಗಾಮಸ್ಥರು ಆಗಮಿಸಿದ್ದರಲ್ಲದೆ, ಪೂಜೆ ಸಲ್ಲಿಸಿದರು.