ಹುಬ್ಬಳ್ಳಿ: ಆನಂದ ಅಸೋಸಿಯೇಟ್ಸ್ ವತಿಯಿಂದ ಸೆ. 10ರಂದು ಬೆಳಗ್ಗೆ 10ಕ್ಕೆ ಧಾರವಾಡದ ಸರಸ್ವತಿ ನಿಕೇತನದಲ್ಲಿ ರಾಜ್ಯಮಟ್ಟದ ಸರ್ವ ಧರ್ಮಗಳ, ಎಲ್ಲ ವರ್ಗಗಳ ವಧು-ವರರ ಹಾಗೂ ಪಾಲಕರ ಪರಸ್ಪರ ಪರಿಚಯದ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಅಸೋಸಿಯೇಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಸುರೇಶ ಕುಪ್ಪಸಗೌಡರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯಗಳ ವಧು- ವರರು ಹಾಗೂ ಪಾಲಕರು ಭಾಗವಹಿಸಲಿದ್ದಾರೆ. ಸಂದರ್ಶನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಧಾರವಾಡ ಮರಾಠಾ ಕಾಲನಿ ಕರ್ನಾಟಕ ಬ್ಯಾಂಕ್ ಹತ್ತಿರವಿರುವ ಸೇವಾ ಕೇಂದ್ರಕ್ಕೆ ಸಂಪರ್ಕಿಸಬಹುದು ಎಂದರು. ಫಕೀರಪ್ಪ ಅಡಗಿ ಸುದ್ದಿಗೋಷ್ಠಿಯಲ್ಲಿದ್ದರು.