ಮಾದಾಪುರ: ಇಲ್ಲಿನ ಎಫ್‌ಎಂಸಿ ಬಡಾವಣೆಯ ವಿನಾಯ ಮಿತ್ರ ಮಂಡಳಿ ವತಿಯಿಂದ ನಡೆದ ೩ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಅದ್ಧೂರಿಯಾಗಿ ನೆರವೇರಿತು.
ಸೆ.೭ಕ್ಕೆ ಶ್ರೀ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಅದೇ ದಿನ ಸಂಜೆ ವಿನಾಯಕ ಮಿತ್ರ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸೆ.೮ನೇ ಭಾನುವಾರ ಸಂಜೆ ವಿನಾಯಕ ಮಿತ್ರ ಮಂಡಳಿ ವತಿಯಿಂದ ರಂಗ ಪೂಜೆ ಏರ್ಪಡಿಸಲಾಗಿತ್ತು.
ಸೆ.೯ನೇ ಸೋಮವಾರ ಮಹಾ ಪೂಜೆಯ ನಂತರ ಎಫ್‌ಎಂಸಿ ಬಡಾವಣೆ, ಜಂಬೂರು ಬಾಣೆ ಮುಖಾಂತರ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಯ ಶೋಭಯಾತ್ರೆಯೊಂದಿಗೆ ತೆರಳಿ ಮಾದಾಪುರ ಹೊಳೆಯಲ್ಲಿ ವಿಸರ್ಜಿಸಲಾಯಿತು. ಮೂರು ದಿನವೂ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.