ಜಿಲ್ಲೆ

ಅದ್ದೂರಿಯಾಗಿ ಜರುಗಿದ ಉತ್ಸವ


ಹಾಸನ: ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದ ಶಕ್ತಿದೇವತೆ ಶ್ರೀ ಬಿಸಿಲು ಮಾರಮ್ಮ ದೇವರ ಉತ್ಸವ ಸೋಮವಾರ ಸಂಜೆ ಅದ್ದೂರಿಯಾಗಿ ಜರುಗಿತು.


ಮೂಲ ದೇವರ ಮೂರ್ತಿಯನ್ನು ರಾಮನಾಥಪುರದ ಕಾವೇರಿ ನದಿಗೆ ಕೊಂಡೊಯ್ದು ಗಂಗಾಸ್ನಾನ ಮಾಡಿಸಿದ ನಂತರ ಮೆರವಣಿಗೆ ಮೂಲಕ ಊರಿಗೆ ಕರೆತರಲಾಯಿತು. ಅಂದು ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರು ಅಲಂಕೃತ ಅಡ್ಡೆಮೇಲೆ ದೇವರ ಮೂರ್ತಿ ಹೊತ್ತು ಉತ್ಸವದಲ್ಲಿ ಸಾಗಿ ಕುಣಿದು ಸಂಭ್ರಮಿಸಿದರು.

ಉತ್ಸವದ ವೇಳೆ ಭಕ್ತರು ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ಭಕ್ತರು ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಹರಕೆ ತೀರಿಸಿ ಭಕ್ತಿ ಭಾವ ಸಮರ್ಪಿಸಿದರು.