ಜಿಲ್ಲೆ

ಗ್ರಾಮ-ಒನ್​ ಫ್ರಾಂಚೈಸಿಗಳಿಗೆ ಆಹ್ವಾನ: ಪದವೀಧರರಿಗೆ ಸ್ವಉದ್ಯೋಗ

arunakunigal

ಇ-ಆಡಳಿತ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಮಗ್ರ ನಾಗರಿಕರ ಸೇವಾ ಕೇಂದ್ರದಿಂದ ಗ್ರಾಮೀಣ ಭಾಗದಲ್ಲಿ ಎಲ್ಲ ನಾಗರಿಕ ಸೇವೆಗಳು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲು ವಿವಿಧ ಜಿಲ್ಲೆಗಳಲ್ಲಿ 'ಗ್ರಾಮ ಒನ್​' ಕೇಂದ್ರ ತೆರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಒನ್​ಗೆ ಫ್ರಾಂಚೈಸಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಬೇರೆ ರೀತಿಯಲ್ಲಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಯಾವ ಜಿಲ್ಲೆಗಳಲ್ಲಿ ನೇಮಕ?: ಕಲಬುರಗಿ, ರಾಯಚೂರು, ಯಾದಗಿರಿ, ವಿಜಯನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಆಯ್ದ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಫ್ರಾಂಚೈಸಿ ಆಧಾರದ ಮೇಲೆ ಗ್ರಾಮ ಒನ್​ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ.

ಅರ್ಹತೆಗಳೇನು?: ಯಾವುದೇ ವಿಭಾಗದಲ್ಲಿ ಪದವಿ ಪಡೆದಿದ್ದು, ಕಂಪ್ಯೂಟರ್​ ಜ್ಞಾನ ಹೊಂದಿರಬೇಕು. ಕನಿಷ್ಠ 1 ರಿಂದ 2 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯವಿರಬೇಕು. ಗ್ರಾಮ ಒನ್​ ಪೊಲೀಸ್​ ತಪಾಸಣಾ ಪ್ರಮಾಣ ಪತ್ರ ಸಲ್ಲಿಸಬೇಕು. ಸಮುಚ್ಛಯ ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸುವಂತಿರಬೇಕು.

ತಂತ್ರಜ್ಞಾನದ ಅವಶ್ಯಕತೆಗಳೇನು?: ಡೆಸ್ಕ್​ಟಾಪ್​/ ಲ್ಯಾಪ್​ಟಾಪ್​, ಬಹುಉದ್ದೇಶದ ಪ್ರಿಂಟರ್​ (ಪ್ರಿಂಟ್​/ ಸ್ಕ್ಯಾನ್​), ಬಯೋಮೆಟ್ರಿಕ್​ ಸ್ಕ್ಯಾನರ್​ (ಸೆಕ್ಯೂಜೆನ್​ ಹ್ಯಾಮಸ್ಟರ್​ ಪ್ರೊ20), ವೆಬ್​ ಕ್ಯಾಮರಾ, ವೈ-ಫೈ ರಿಸೀವರ್​, ಇಬ್ಬರು ಅಂತರ್ಜಾಲ ಸೇವೆ ಒದಗಿಸುವವರಿಂದ ಅಂತರ್ಜಾಲ ಸಂಪರ್ಕ ಹೊಂದಿರಬೇಕು.

  • ಮೂಲ ಸೌಕರ್ಯಗಳೇನು ಇರಬೇಕು?
  • ಫ್ರಾಂಚೈಸ್​ ಮೂಲಕ ಸ್ಥಾಪಿಸಲಾಗುವ ಗ್ರಾಮ ಒನ್​ ಕೇಂದ್ರವು ಒಂದು ವಿಶೇಷ (ಪ್ರತ್ಯೇಕ) ಪ್ರವೇಶವುಳ್ಳ ವಿಶೇಷ ವಿಭಜನೆ (ಪಾರ್ಟಿಷನ್​) ಹೊಂದಿರಬೇಕು.
  • ಗ್ರಾಮಒನ್​ ಕೇಂದ್ರವು ಕನಿಷ್ಠ 100 ಚದರಡಿಗಳ ಅಳತೆ ಹೊಂದಿರಬೇಕು. ಗ್ರಾಹಕರು ಕುಳಿತುಕೊಳ್ಳಲು 4 ಕುರ್ಚಿಗಳಿರಬೇಕು.
  •  ಹೆಸರಿನ ಫಲಕ/ ದರಪಟ್ಟಿ/ ಕಟ್ಟಡದ ಬಣ್ಣ/ ಗ್ರಾಮಒನ್​ ಲಾಂಛನ, ಬ್ರಾಂಡಿಂಗ್​ ಮುದ್ರೆಗಳು ಗ್ರಾಮಒನ್​ ಯೋಜನೆಯ ಬ್ರಾಂಡಿಂಗ್​ ಗುಣಮಟ್ಟದ ರೀತಿಯಲ್ಲಿರಬೇಕು.
  • ಫ್ರಾಂಚೈಸಿಗಳು ತಮ್ಮ ಸಮುಚ್ಛಯವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರಿಸಿಕೊಳ್ಳಬೇಕು.
  • ಕೊಠಡಿಯ ನೆಲಹಾಸು ಟೈಲ್ಸ್​/ ಗ್ರಾನೈಟ್​ನಿಂದ ಕೂಡಿರಬೇಕು, ಆರ್​ಸಿಸಿ ಮೇಲ್ಛಾವಣಿ ಇರಬೇಕು ಮತ್ತು ಸಿಮೆಂಟ್​ ಇಟ್ಟಿಗೆ/ ಸಿಮೆಂಟ್​ ಕಲ್ಲಿನಿಂದ ಗೋಡೆಗಳು ನಿರ್ಮಾಣವಾಗಿರಬೇಕು. ಯಾವುದೇ ಭಾಗದಲ್ಲಿ ನೀರು ಸೋರಿಕೆ ಇರಬಾರದು.
  • ಪೀಠೋಪಕರಣಗಳು ಗ್ರಾಮ ಒನ್​ ಯೋಜನೆಯ ನಿರ್ದೇಶನದಂತೆ ಇರಬೇಕು.
  • ಫ್ರಾಂಚೈಸಿಗಳು ಸಿಸಿಟಿವಿ ಕಣ್ಗಾವಲು ಮತ್ತು ಎಲ್​ಸಿಡಿಟಿವಿ ಹೊಂದಿರಬೇಕು.

ಅರ್ಜಿಶುಲ್ಕ: ಫ್ರಾಂಚೈಸಿ ಪ್ರಾಯೋಗಿಕ ಯೋಜನೆಗೆ ಅರ್ಜಿಶುಲ್ಕ 100 ರೂ. ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 4.5.2022

ಅಧಿಸೂಚನೆ: https://bit.ly/3MCFYYg