ಜಿಲ್ಲೆ

ಕೃಷಿ ವಿಶ್ವವಿದ್ಯಾಲಯಕ್ಕೆ ಎ ಗ್ರೇಡ್ ಮಾನ್ಯತೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಷ್ಟ್ರೀಯ  ಕೃಷಿ ಶಿಕ್ಷಣ ಮಾನ್ಯತೆ ಮಂಡಳಿ (ಎನ್‌ಎಇಎಬಿ), ಭಾರತೀಯ ಕೃಷಿ ಅನುಸಂಧಾನ ಪರಿಷತ್ ತಂಡದ ಮೌಲ್ಯಮಾಪನ ವರದಿಯ ಅನುಸಾರ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಎ ಗ್ರೇಡ್ ಮಾನ್ಯತೆ ಲಭಿಸಿದೆ.

ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ತಂಡವು 2019ರಿಂದ 2024ರವರೆಗಿನ ಬೋಧನೆ, ಸಂಶೋಧನೆ, ವಿಸ್ತರಣೆ ಹಾಗೂ ಆಡಳಿತ ವಿಷಯಗಳಲ್ಲಿನ ಪ್ರಗತಿಯ ಆಧಾರದ ಮೇಲೆ ಮಾನ್ಯತೆ ದೊರಕಿದೆ. ವಿಶ್ವವಿದ್ಯಾಲಯದ ವಿವಿಧ ಆವರಣಗಳಲ್ಲಿರುವ ಮಹಾವಿದ್ಯಾಲಯಗಳು, ಸಂಶೋಧನಾ, ವಿಸ್ತರಣಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು, ಬೀಜೋತ್ಪಾದನೆ, ಮೂಲ ಸೌಕರ್ಯಗಳು, ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಾಧನೆಯ ಆಧಾರದ ಮೇಲೆ ಮಾನ್ಯತೆ ನೀಡಲಾಗುತ್ತದೆ. ಇದು 2029ರ ಮಾ. 31ರವರೆಗೆ ಅನ್ವಯವಾಗುತ್ತದೆ.