ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಗಂಗೊಳ್ಳಿ ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಸುಸಜ್ಜಿತ ಸರ್ಕಾರಿ ಕಟ್ಟಡಗಳು ಉಪಯೋಗಿಕ್ಕಿಲ್ಲದೆ ಪಾಳುಬಿದ್ದಿದೆ. ಮೀನುಗಾರಿಕೆ ಮತ್ತು ಬಂದರು ಇಲಾಖೆ ಈ ಕಟ್ಟಡಗಳು ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಕಟ್ಟಡ ಶಿಥಿಲಾವಸ್ಥೆಗೆ ಬಂದು ತಲುಪಿದೆ.
ಗಂಗೊಳ್ಳಿ ಬಂದರು ಪ್ರದೇಶದ ಒಳಗೆ ಇರುವ ಮೀನುಗಾರಿಕಾ ಇಲಾಖೆ ವತಿಯಿಂದ 20 ವರ್ಷದ ಹಿಂದೆ 40ಕ್ಕೂ ಮಿಕ್ಕಿ ರೆಸ್ಟ್ ಶೆಡ್ ನಿರ್ಮಿಸಲಾಗಿತ್ತು. ಈ ಕಟ್ಟಡದಲ್ಲಿ ಕೆಲವು ರೆಸ್ಟ್ ಶೆಡ್ ಹೊರತುಪಡಿಸಿ ಇನ್ನುಳಿದ ರೆಸ್ಟ್ ಶೆಡ್ ನಿರ್ಮಾಣಗೊಂಡು ದಶಕಗಳೇ ಕಳೆದಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಶೆಡ್‌ಗಳು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಂತಾಗಿದೆ. ಈ ಕಟ್ಟಡದ ಸುತ್ತಲೂ ದೊಡ್ಡ ದೊಡ್ಡ ಗಿಡಗಂಟಿ ಬೆಳೆದಿದ್ದು, ಕಟ್ಟಡಗಳು ಭೂತ ಬಂಗಲೆಯಂತಾಗಿದೆ. ಪರಿಸರದಲ್ಲಿ ವಿಷ ಜಂತುಗಳ ಹಾವಳಿ ಕಾಣಿಸಿಕೊಂಡಿದೆ.
ನಿರ್ವಹಣೆ ಕೊರತೆ: ಕಟ್ಟಡ ನಿರ್ವಹಣೆ ಮಾಡಲು ಇಲಾಖೆಯಿಂದ ಅನುದಾನ ದೊರೆಯುತ್ತಿಲ್ಲ ಎನ್ನಲಾಗುತ್ತಿದ್ದು, ದುರಸ್ತಿಗೆ ಇಲಾಖೆ ಸ್ಥಳೀಯ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಕೆಲವು ವರ್ಷಗಳಿಂದ ಕಟ್ಟಡದ ನಿರ್ವಹಣೆ ಅನುದಾನ ಸ್ಥಗಿತಗೊಂಡಿರುವುದರಿಂದ ಕಟ್ಟಡ ಈ ಸ್ಥಿತಿಗೆ ತಲುಪಲು ಕಾರಣ ಎನ್ನಲಾಗುತ್ತಿದೆ. ಕಟ್ಟಡ ಉಪಯೋಗಿಸದ ಕಾರಣ ಬಾಗಿಲು, ಕಿಟಕಿ ಬಾಗಿಲುಗಳು ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ತಿಗೆ ಇಲಾಖಾಧಿಕಾರಿಗಳು ಹಿಂದು ಮುಂದು ನೋಡಬೇಕಾದ ಅನಿವಾರ್ಯ ಪರಿಸ್ಥಿತಿ.
ಅನುದಾನದ ಕೊರತೆಯಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳು ಸೊರಗಿ ಹೋಗುತ್ತಿದ್ದು, ಮೀನುಗಾರರ ಅನುಕೂಲಕ್ಕೆ ನಿರ್ಮಿತ ರೆಸ್ಟ್ ಶೆಡ್ ಸಂಕೀರ್ಣ ದಶಕ ಸಂದರೂ ಉಪಯೋಗಕ್ಕೆ ಬೀಳದೆ ಇರುವುದು ಮತ್ತು ಸೊತ್ತುಗಳು ನಾಶವಾಗುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಆದಷ್ಟು ಶೀಘ್ರ ವ್ಯವಸ್ಥೆ ಸರಿಪಡಿಸಿ ಜನರ ಉಪಯೋಗಕ್ಕೆ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಗಂಗೊಳ್ಳಿ ಬಂದರಿನಲ್ಲಿರುವ ರೆಸ್ಟ್ ಶೆಡ್ ಟೆಂಡರ್ ಮೂಲಕ ಹಂಚಿಕೆ ಮಾಡಲಾಗಿದ್ದು, ಬಹುತೇಕ ಶೆಡ್‌ಗಳನ್ನು ಮೀನುಗಾರರು ಉಪಯೋಗಿಸುತ್ತಿದ್ದಾರೆ. ಶೆಡ್ ಸಮೀಪದಲ್ಲಿ ಬೆಳೆದು ನಿಂತಿರುವ ಗಿಡಗಂಟಿ ತೆಗೆದು ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿದೆ. ಗೋಪಾಲಕೃಷ್ಣ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಗಂಗೊಳ್ಳಿ https://www.vijayavani.net/karnataka-banks-work-is-commendable https://www.vijayavani.net/make-the-most-of-opportunities-to-have-a-bright-future