ಜಿಲ್ಲೆ

ಕ್ರೀಡಾಸಕ್ತರಿಗೆ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಅವಕಾಶ

ಹಳೆಯಂಗಡಿ: ಕ್ರೀಡೆಯಲ್ಲಿ ಆಸಕ್ತಿಯುಳ್ಳವರಿಗೆ ಪ್ರೋತ್ಸಾಹ ನೀಡಿದಲ್ಲಿ ಉತ್ತಮವಾದ ಅವಕಾಶಗಳು ಲಭ್ಯವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೋಚ್ ಸಾಮುವೆಲ್ ಜಯಕರ್ ಮುತ್ತು ಹೇಳಿದರು.

ಹಳೆಯಂಗಡಿಯ ಸಿಎಸ್‌ಐ ಅಮ್ಮನ್ ಮೆಮೊರಿಯಲ್ ಚರ್ಚ್‌ನಲ್ಲಿ ಇತ್ತೀಚೆಗೆ ಬೆಳೆ ಕಾಣಿಕೆ ಹಬ್ಬದ ಆಟೋಟ ಪಂದ್ಯಾಟದ ಬಹುವಾನ ವಿತರಣಾ ಕಾರ್ಯಕ್ರಮದಲ್ಲಿ ವಾತನಾಡಿದರು.

ಸಿಎಸ್‌ಐ ಕೆಎನ್‌ಡಿ ನಿವೃತ್ತ ಸಭಾಪಾಲಕ ಡೇನಿಯಲ್ ಹೊನೇಕರ್ ಕ್ರೀಡಾಕೂಟ ಉದ್ಘಾಟಿಸಿದರು. ಹಳೆಯಂಗಡಿ ಸಿಎಸ್‌ಐ ಅಮ್ಮನ ಮೆಮೋರಿಯಲ್ ಚರ್ಚ್‌ನ ಸಭಾಪಾಲಕ ರೆ.ಅಮೃತ ರಾಜ್ ಖೋಡೆ ಅಧ್ಯಕ್ಷತೆ ವಹಿಸಿದ್ದರು. ಪಣಂಬೂರು ಸಿಎಸ್‌ಐ ಚರ್ಚಿನ ಸಭಾಪಾಲಕರಾದ ಸಂಧ್ಯಾ ಖೋಡೆ ಉಪಸ್ಥಿತರಿದ್ದರು.

ಪಂದ್ಯಾಟ ಸಮಿತಿ ಕಾರ್ಯದರ್ಶಿ ವಿನ್ಸೆಂಟ್ ಸಾಮುವೆಲ್ ಕರ್ಕಡ ಸ್ವಾಗತಿಸಿದರು. ಕೋಶಾಧಿಕಾರಿ ಎಲಿಜಬೆತ್ ಅಂಡ್ರೋಸ್ ಮತ್ತು ಜತೆ ಕಾರ್ಯದರ್ಶಿ ಗಾಡ್‌ಫ್ರೀ ಉದಯ ಬರ್ನಾಡ್ ವಿಜೇತರ ಪಟ್ಟಿ ವಾಚಿಸಿದರು. ಜತೆ ಕೋಶಾಧಿಕಾರಿ ಸುರೇಖಾ ಸಾಲಿನ್ಸ್ ವಂದಿಸಿದರು.