ಜಿಲ್ಲೆ

ಬುರ್ಕಾ ಬಟನ್​ನಲ್ಲೂ ಚಿನ್ನ ಸಾಗಾಟ! ಮಂಗಳೂರಲ್ಲಿ 5 ಲಕ್ಷ ಮೌಲ್ಯದ ಚಿನ್ನ ಪತ್ತೆ

arunakunigal

ಮಂಗಳೂರು: ಬುರ್ಕಾ ಬಟನ್​ನಲ್ಲೂ ಅಕ್ರಮವಾಗಿ ಚಿನ್ನ ಸಾಗಾಟ ಮಾಡುವ ವಂಚಕರ ಜಾಲ ಪತ್ತೆಯಾಗಿದೆ.

ದುಬೈಯಿಂದ ಮಂಗಳೂರಿಗೆ ಬುರ್ಕಾದ ಬಟನ್​ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 5.34 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳ ತಂಡ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಿದೆ.

24 ಕ್ಯಾರೆಟ್​ ಪರಿಶುದ್ಧತೆಯ 100 ಗ್ರಾಂ ಚಿನ್ನವನ್ನು ಸಣ್ಣ ರಿಂಗ್​ ಆಕಾರದಲ್ಲಿ ಅಳವಡಿಸಿ ಸಾಗಾಟ ಮಾಡಲಾಗುತ್ತಿತ್ತು ಎಂದು ಕಸ್ಟಮ್ಸ್​ ಅಧಿಕಾರಿಗಳು ತಿಳಿಸಿದ್ದಾರೆ.