ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಆಟೋ ಚಾಲಕರ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಿವರಾಮು, ರಾಜು, ಸಂಜಯ್, ಲೋಕೇಶ್, ಮಾದೇವ್, ನಂದೀಶ್ ಇದ್ದರು.  
ಜಿಲ್ಲೆ

ವಿಜೃಂಭಣೆಯ ಕನ್ನಡ ರಾಜ್ಯೋತ್ಸವ

ರವಿಕುಮಾರ್ ಪಿ. ಕೆ

ಮದ್ದೂರು: ತಾಲೂಕಿನ ಬೆಸಗರಹಳ್ಳಿಯಲ್ಲಿ ಆಟೋ ಚಾಲಕರ ವತಿಯಿಂದ ಸೋಮವಾರ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಆಟೋ ಚಾಲಕರಾದ ಶಿವರಾಮು ಹಾಗೂ ರಾಜು ಮಾತನಾಡಿ, ಆಟೋ ಚಾಲಕರು ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿನಿತ್ಯ ಹೋರಾಟ ಮಾಡುತ್ತಾರೆ ಹಾಗೂ ಆಟೋಗಳ ಮೇಲೆ ಕನ್ನಡ ಬಗ್ಗೆ ಅಭಿಮಾನ ಮೂಡಿಸುವ ಸಾಲುಗಳನ್ನು ಬರೆಸಿಕೊಂಡು ಭಾಷೆಯ ಬಗ್ಗೆ ಅಭಿಮಾನ ತೋರುತ್ತಿದ್ದೇವೆ ಎಂದರು.

ನಮ್ಮಂತ ಆಟೋ ಚಾಲಕರನ್ನು ಗುರುತಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು ಹಾಗೂ ನಮಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಾಮಸ್ಥರಿಗೆ ಸಿಹಿ ವಿತರಣೆ ಮಾಡಲಾಯಿತು. ಶಿವರಾಮು, ರಾಜು, ಸಂಜಯ್, ಲೋಕೇಶ್. ಮಾದೇವ್, ನಂದೀಶ್ ಇದ್ದರು.