ಜಿಲ್ಲೆ

ವಿಜೃಂಭಣೆಯ ಆರಾಧನಾ ಮಹೋತ್ಸವ

ಪ್ರಸಿನ್ ಕೆ.ಆರ್

ಗುಂಡ್ಲುಪೇಟೆ: ತಾಲೂಕಿನ ಕಡತಾಳಕಟ್ಟೆಹುಂಡಿ ಗ್ರಾಮದಲ್ಲಿ ಬಸವೇಶ್ವರ ದೇವರ 6ನೇ ವರ್ಷದ ಆರಾಧನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಈ ಅಂಗವಾಗಿ ಬಸವೇಶ್ವರ ದೇವಾಲಯ ಹಾಗೂ ಗ್ರಾಮದ ಬೀದಿಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಚಾಮರಾಜನಗರ ವಿರಕ್ತಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿಯವರ ಪುಷ್ಪಾಂದೋಳಿಕೋತ್ಸವ, ಕೆರೆ ಮಹದೇಶ್ವರ ಹಾಗೂ ತೋಡಿಪುರ ಮಹದೇಶ್ವರರ ಉತ್ಸವ ಮೂರ್ತಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇಪಾಪುರ ಭಿಕ್ಷದ ಮಠಾಧ್ಯಕ್ಷರಾದ ಬಸವಣ್ಣಸ್ವಾಮೀಜಿ, ಶಶಿಶೇಖರಾರಾಧ್ಯ ಹಾಗೂ ಗ್ರಾಮದ ಭಕ್ತರು ಇದ್ದರು.