ಸವಣೂರ: ಚಾತುರ್ವಸ್ಯ ವೃತದ ಅಂಗವಾಗಿ ಪಟ್ಟಣದ ಶ್ರೀಸತ್ಯಬೋಧ ಸ್ವಾಮೀಜಿ ಮಠಕ್ಕೆ ಗುರುವಾರ ಸಂಜೆ ಕೂಡಲಿ ಶ್ರೀ ಆರ್ಯ ಅಕ್ಷೋಭ್ಯ ತೀರ್ಥ ಮಠದ ಶ್ರೀಗಳಾದ ರಘು ವಿಜಯ ತೀರ್ಥರು ಭೇಟಿ ನೀಡಿ ಮೂಲ ವೃಂದಾವನ ಸನ್ನಿಧಾನದ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಮಠದ ಪೂಜಾ ಪರ್ಯಾಯಸ್ಥರಾದ ಅವಿನಾಶಆಚಾರ್ಯ ರಾಯಚೂರ, ಅಭಿಷೇಕಆಚಾರ್ಯ ರಾಯಚೂರು ಸೇರಿದಂತೆ ನೆರೆದ ಸದ್ಭಕ್ತರಿಗೆ ಫಲಮಂತ್ರಕ್ಷತೆ ವಿತರಿಸಿದರು. ರಂಗಾಚಾರ್ಯ ರಾಯಚೂರು, ಪವಮಾನ ನಾಮಾವಳಿ, ಪಾಂಡುರಂಗ ರಿತ್ತಿ, ಈಶಣ್ಣ ಸಾಹುಕಾರ ಹಾಗೂ ಇತರರು ಪಾಲ್ಗೊಂಡಿದ್ದರು.
ಭಾಗವತ ಶ್ರವಣ ಯಜ್ಞ: ಶ್ರೀಮಠದಲ್ಲಿ ಜು. 20ರಂದು ಭಾಗವತದ ಶ್ರವಣ ಯಜ್ಞದ ಅಂಗವಾಗಿ ಹುಬ್ಬಳ್ಳಿಯ ವಿದ್ವಾನ್ ಶ್ರೀಕರಾಚಾರ್ಯ ಅಡವಿ ಅವರಿಂದ ಪ್ರಥಮ ಸ್ಕಂದದ ಪ್ರವಚನ ನೆರವೇರಲಿದೆ. ಬೆಳಗ್ಗೆ 10.30ರಿಂದ ಪ್ರವಚನ ಆರಂಭವಾಗಲಿದೆ. ಆಸಕ್ತರು ಪಾಲ್ಗೊಳ್ಳಬೇಕು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.