an Indian or Asian person laying dead with outstretched hand during COVID-19 or corona virus outbreak 
ಜಿಲ್ಲೆ

ಪ್ರೀತಿ&ಪ್ರೇಮದ ಗುಂಗಿಗೆ ಬಲಿಯಾದ ಬಾಲಕಿ

ಆನೇಕಲ್​ : ಮೋಜು ಮಸ್ತಿಯ ನೆಪದಲ್ಲಿ ಅಪ್ರಾಪ್ತೆ ಸಾವಿಗೆ ಕಾರಣರಾದ ಆರೋಪದಲ್ಲಿ ನಾಲ್ವರನ್ನು ಬನ್ನೇರುಟ್ಟ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಬೆಂಗಳೂರಿನ ನಾಯಂಡಹಳ್ಳಿ ಅಜಯ್​(18), ಇರ್ಫಾನ್​(20), ಮುಬಾರಕ್​(18) ಹಾಗೂ ಕಾನೂನು ಸಂರ್ಷಕ್ಕೊಳಪಟ್ಟವ ಬಂಧಿತರು. ಮತ್ತೊಂದೆಡೆ, ಬಾಲಕಿ ಪಾಲಕರು, ಪುತ್ರಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಬನ್ನೇರುಟ್ಟ ಠಾಣೆಯಲ್ಲಿ ದೂರು ನೀಡಿದ್ದು, ಅಪಹರಣ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಏನಿದು ಟನೆ?: ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದ ಅಜಯ್​, ಕಾಲಕ್ರಮೇಣ ಪ್ರೀತಿಯ ನಾಟಕವಾಡಿದ್ದ ಎನ್ನಲಾಗಿದೆ. ಅ.24ರಂದು ಜತೆಗೆ ಬರುವಂತೆ ಪುಸಲಾಯಿಸಿದ್ದ. ಈ ವೇಳೆ ಒಂದು ಬೈಕಿನಲ್ಲಿ ಅಜಯ್​, ಬಾಲಕಿ ಹಾಗೂ ಇನ್ನೊಬ್ಬ ಅಪ್ರಾಪ್ತ, ಮತ್ತೊಂದು ಬೈಕಿನಲ್ಲಿ ಇಬ್ಬರು ಸೇರಿ ಒಟ್ಟು ಐವರು ಪ್ರಯಾಣ ಬೆಳೆಸಿದ್ದಾರೆ. ಹೊಸಕೋಟೆ ಬಳಿ ರಸ್ತೆಯ ಡಿವೈಡರ್​ಗೆ ಬೈಕ್​ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಮಾಹಿತಿ ಮೇರೆಗೆ ವಿಷಯ ತಿಳಿದ ಹೊಸಕೋಟೆ ಪೊಲೀಸರು, ಸ್ಥಳಕ್ಕೆ ತೆರಳಿ ಅಜಯ್​ ಹಾಗೂ ಕಾನೂನು ಸಂರ್ಷಕ್ಕೊಳಪಟ್ಟವನನ್ನು ವಶಕ್ಕೆ ಪಡೆದು, ಅವರ ಮಾಹಿತಿ ಮೇರೆಗೆ ಬಾಲಕಿಯ ಪಾಲಕರಿಗೆ ಕರೆ ಮಾಡಿ ಪುತ್ರಿ ಮೃತಪಟ್ಟಿರುವುದನ್ನು ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಪಾಲಕರಿಗೆ ಹಸ್ತಾಂತರಿಸಲಾಗಿದೆ. ಬನ್ನೇರುಟ್ಟ ಪೊಲೀಸರು ತನಿಖೆ ಕೈಗೊಂಡು ತಲೆಮರೆಸಿಕೊಂಡಿದ್ದ ಇನ್ನಿಬ್ಬರನ್ನು ಬಂಧಿಸಿದ್ದಾರೆ.

ಬಾಲಕಿ ತಂದೆಗೆ ಬೆದರಿಕೆ ಹಾಕಿದ್ದ ಆರೋಪಿ : ಆರು ತಿಂಗಳ ಹಿಂದೆ ರಾತ್ರಿ ವೇಳೆ ಬಾಲಕಿ ತಂದೆಗೆ ಕರೆ ಮಾಡಿದ್ದ ಆರೋಪಿ ಅಜಯ್​, ನೋಟ್​ ಬುಕ್​ ಬೇಕಿದೆ. ಹಾಗಾಗಿ ಮಗಳಿಗೆ ಫೋನ್​ ಕೊಡುವಂತೆ ಹೇಳಿದ್ದ. ಬಳಿಕ ಬಾಲಕಿ ತಂದೆ ಮತ್ತೆ ಈ ರೀತಿ ಕರೆಮಾಡುವ ಹಾಗಿಲ್ಲ ಎಂದು ಎಚ್ಚರಿಸಿದ್ದರು. ಇದರಿಂದ ಕೆರಳಿದ ಆರೋಪಿ, ಬಾಲಕಿ ತಂದೆಗೆ ಅವಾಚ್ಯವಾಗಿ ನಿಂದಿಸಿ ಮಗಳನ್ನು ಕಿಡ್ನಾಪ್​ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಕೊಲೆ ಆರೋಪ : ಬೈಕ್​ನಲ್ಲಿ ಹೋಗುವಾಗ ಅಪಘಾತ ಆಗಿದೆ. ಆದರೆ, ಅಜಯ್​ ಹಾಗೂ ಅಪ್ರಾಪ್ತನಿಗೆ ಸ್ವಲ್ಪವೂ ಗಾಯ ಆಗಿಲ್ಲ. ಆದರೆ ನನ್ನ ಮಗಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ, ಅಪಘಾತದಲ್ಲಿ ಸಾವು ಸಂಭವಿಸಿಲ್ಲ. ಮಗಳನ್ನು ಕೊಲೆ ಮಾಡಲಾಗಿದೆ ಎಂದು ಬಾಲಕಿ ತಂದೆ ಆರೋಪಿಸಿದ್ದಾರೆ.

ನಾಪತ್ತೆ ದೂರು : ನ.24ರಂದು ಬಾಲಕಿ ಶಾಲೆಗೆಂದು ಹೋಗಿದ್ದವಳು ವಾಪಸ್​ ಬಂದಿಲ್ಲ. ಬಳಿಕ ಪಾಲಕರು ಅಜಯ್​ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಿಡ್ನಾಪ್​ ದೂರು ದಾಖಲಿಸಿದ್ದರು. ಬಳಿಕ ಅಪಹರಣ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.