ಜಿಲ್ಲೆ

ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ

ದೀಪಕ ತಲವಾಯಿ

ಅಂಕೋಲಾ: ತಾಲೂಕಿನ ಬಿಳಿಹೊಂಯ್ಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ದೇವೇಂದ್ರ ಈಶ್ವರ ಹರಿಕಂತ್ರ ಎಂಬುವವರ ಮನೆ ಬಳಿ ಗುರುವಾರ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವೊಂದನ್ನು ಉರಗ ರಕ್ಷಕ ಮಹೇಶ ನಾಯ್ಕ ಅವರ್ಸಾ ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಬಿಳಿಹೊಂಯ್ಗಿ ನಿವಾಸಿ ದೇವೇಂದ್ರ ಹರಿಕಂತ್ರ ಎನ್ನುವವರ ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವು ಗೂಡಿನಲ್ಲಿ ಕೋಳಿ ಮತ್ತು ಕೋಳಿ ಮರಿಗಳನ್ನು ನುಂಗಿ ಗೂಡಿನಲ್ಲೇ ಇತ್ತು. ಬೆಳಗ್ಗೆ ಗೂಡಿನಲ್ಲಿ ಹೆಬ್ಬಾವು ಸೇರಿಕೊಂಡಿರುವುದನ್ನು ಗಮನಿಸಿದ ಮನೆಯವರು ಉರಗ ರಕ್ಷಕ ಮಹೇಶ ನಾಯ್ಕ ಅವರನ್ನು ಸಂಪರ್ಕಿಸಿದ್ದರು. ಮಹೇಶ ಅವರು ಹೆಬ್ಬಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾದರು.