ಕುಕನೂರಿನ ಸೇವಾಲಾಲ್ ವೃತ್ತದಲ್ಲಿ ಬಂಜಾರಾ ಸಮುದಾಯದಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಶನಿವಾರ ಆಚರಿಸಲಾಯಿತು. ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ, ಗ್ರಾಪಂ ಸದಸ್ಯ ಯಮನೂರಪ್ಪ ಕಟ್ಟಿಮನಿ, ಪ್ರಮುಖ ದೇವೇಂದ್ರಪ್ಪ ರಾಠೋಡ ಇತರರಿದ್ದರು.  
ಜಿಲ್ಲೆ

ಸಮಾಜದ ಉದ್ಧಾರಕ್ಕೆ ಶ್ರಮಿಸಿದ ಮಹನೀಯ- ಗ್ರೇಡ್-2 ತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿ ಅನಿಸಿಕೆ

ಕುಕನೂರು: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಬಂಜಾರ ಸಮುದಾಯದ ಧರ್ಮಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು.

ಗ್ರೇಡ್-2 ತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿ ಮಾತನಾಡಿ, ಸೇವಾಲಾಲ್ ಅವರು ನಾಡಿನ ಉದ್ದಗಲಕ್ಕೂ ಸಂಚರಿಸಿ ಧರ್ಮ ಬೋಧನೆ ಮೂಲಕ ಬಂಜಾರ ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಅಂತಹ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನಂತರ ಬಂಜಾರ ಸಮುದಾಯದ ಪ್ರಮುಖರಿಂದ ಸೇವಾಲಾಲ್ ವೃತ್ತದಲ್ಲಿ ವಿಶೇಷ ಪೂಜೆ ಹಾಗೂ ಹವನ ಮಾಡಿ ಶ್ರೀ ಸೇವಾಲಾಲ್ ಮಹಾರಾಜರ ಸ್ಮರಣೆ ಮಾಡಲಾಯಿತು.

ಶಿರಸ್ತೇದಾರ್ ಮುಸ್ತಫಾ, ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ, ಗ್ರಾಪಂ ಸದಸ್ಯ ಯಮನೂರಪ್ಪ ಕಟ್ಟಿಮನಿ, ಸಮಾಜದ ಪ್ರಮುಖರಾದ ದೇವೇಂದ್ರಪ್ಪ ರಾಠೋಡ, ಹಂಪಣ್ಣ ನಾಯಕ, ಬಸವಂತಪ್ಪ ಕಟ್ಟಿಮನಿ, ಯಲ್ಲಪ್ಪ ಕಾರಭಾರಿ, ಈರಯ್ಯ ಕುರ್ತಕೋಟಿ, ಯಮನೂರಪ್ಪ ಭಾನಾಪುರ, ಪರಸಪ್ಪ ಕಾರಭಾರಿ, ವಿಶ್ವನಾಥ ಕುಣಿಕೇರಿ, ಯಮನೂರಪ್ಪ ಕಾರಭಾರಿ ಇತರರಿದ್ದರು.