ಹುಬ್ಬಳ್ಳಿ: ಇಲ್ಲಿನ ಬೈರಿದೇವರಕೊಪ್ಪದ ಶೈಲಶ್ರೀ ಮಂಜುನಾಥ ಫೈನ್ ಆರ್ಟ್ಸ್ ಮತ್ತು ಎಜುಕೇಷನ್ ಸಂಸ್ಥೆಯ 17ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಕಲಾ ಮುತ್ತುಗಳ ಸಮ್ಮೇಳನವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿಯ ಮೂಲಕ ಸಂಸ್ಕಾರ ಬೆಳೆಸುವಲ್ಲಿ ಕಲಾ ಮುತ್ತುಗಳ ಸಮೆ್ಮೕಳನದ ಪಾತ್ರ ಬಹಳ ಹಿರಿದಾಗಿದೆ ಎಂದರು.
ನಾಡಿನ ಕಲಾವಿದರು ಗಾಯನ, ಜಗ್ಗಲಗಿ, ವಚನ ಗಾಯನ, ಸಂಬಾಳ ಕಲೆ, ಡೊಳ್ಳು ನೃತ್ಯ, ಸಾಮೂಹಿಕ ಗಾಯನ, ತಬಲಾ, ಗೀಗಿ ಪದ, ಜಾನಪದ ನೃತ್ಯ, ಕೋಲಾಟ, ಭರತನಾಟ್ಯ, ದೇಶಿಯ ಮತ್ತು ವಿದೇಶಿ ನೃತ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಗೆ ಮನೋರಂಜನೆ ಒದಗಿಸಿದರು.
ಸಂಸ್ಥೆಯ ಅಧ್ಯಕ್ಷೆ ಶೈಲಶ್ರೀ ಮಂಜುನಾಥ ಕಲಾವಿದರನ್ನು ಸನ್ಮಾನಿಸಿದರು. ನ್ಯಾಯವಾದಿ ಶಿವು ಕೊಪ್ಪದ, ವರ್ಣ ಮಯೂರಿ ಕಲಾ ಸಂಸ್ಥೆಯ ಮುಖ್ಯಸ್ಥೆ ಚೈತ್ರಾ ವಸ್ತ್ರದ ಹಾಗೂ ಇತರರು ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಅಮಿತ ಶಿಂಧೆ ಸ್ವಾಗತಿಸಿದರು. ಅಂಕಿತಾ ಶಿಂಧೆ ನಿರೂಪಿಸಿದರು.