ಜಿಲ್ಲೆ

ಕುಮಟಾ ಹೊನ್ಮಾಂವ ಸೇತುವೆ ಬಳಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ

ಕುಮಟಾ: ಪಟ್ಟಣದ ಹೊನ್ಮಾಂವ ಸೇತುವೆ ಮೇಲಿಂದ ಗ್ಯಾಸ್ ಟ್ಯಾಂಕರೊಂದು ಹಳ್ಳಕ್ಕೆ ಬಿದ್ದ ಘಟನೆ ಬುಧವಾರ ಸಾಯಂಕಾಲ ನಡೆದಿದೆ. ಮಂಗಳೂರಿಗೆ ತೆರಳುತ್ತಿದ್ದ ಖಾಲಿ ಇರುವ ಎಚ್‌ಪಿ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ರೈಲಿಂಗ್‌ಗೆ ಬಡಿದು ಕೆಳಗೆ ಬಿದ್ದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಅಲ್ಪಮಟ್ಟಿನ ಗಾಯವಾಗಿದ್ದು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಟ್ಯಾಂಕರ್ ಖಾಲಿ ಇದ್ದುದರಿಂದ ಅಪಾಯವಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಗ್ನಿಶಾಮಕ ಹಾಗೂ ಪೊಲೀಸರು ಸಾರ್ವಜನಿಕರ ಆತಂಕ ದೂರ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.